Sunday, June 7, 2026
Homeಕರಾವಳಿಉಡುಪಿಉಡುಪಿ; ಬೈಕ್ ನಿಂದ ಬಿದ್ದು ಗಾಯಗೊಂಡಿದ್ದ ವಿದ್ಯಾರ್ಥಿನಿ ಸಾವು

ಉಡುಪಿ; ಬೈಕ್ ನಿಂದ ಬಿದ್ದು ಗಾಯಗೊಂಡಿದ್ದ ವಿದ್ಯಾರ್ಥಿನಿ ಸಾವು

- Advertisement -
- Advertisement -

ಉಡುಪಿ: ಬೈಕಿನಿಂದ ಬಿದ್ದು ಗಾಯಗೊಂಡಿದ್ದ ವಿದ್ಯಾರ್ಥಿನಿಯೊಬ್ಬಳು ಸಾವನ್ನಪ್ಪಿರುವ ಘಟನೆ ಮಣಿಪಾಲದಲ್ಲಿ ನಡೆದಿದೆ. ಮೃತರನ್ನು ಮಹಾರಾಷ್ಟ್ರದ ಶಬ್ಬೀರ್ ಹುಸೈನ್ ಎಂಬವರ ಮಗಳು, ಮಣಿಪಾಲ ಸ್ಕೂಲ್ ಆಫ್ ಲೈಸಪ್ ಸೈನ್ಸ್ ಕಾಲೇಜಿನ ವಿದ್ಯಾರ್ಥಿನಿ ಝಹರಾ ಶಬ್ಬೀರ್ ಹುಸೈನ್ (24) ಎಂದು ಗುರುತಿಸಲಾಗಿದೆ.

ಸೆ.24ರಂದು ಮಣಿಪಾಲ ಎಂಐಟಿ ರಸ್ತೆಯಲ್ಲಿ ಬೈಕಿನಿಂದ ಬಿದ್ದು ಗಾಯಗೊಂಡಿದ್ದ ಈಕೆ, ಮಣಿಪಾಲ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆದು ಬಿಡುಗಡೆಗೊಂಡಿದ್ದಳು. ಬಳಿಕ ಕಾಲೇಜಿನ ಪರೀಕ್ಷೆ ಬರೆದು ಸಂಪೂರ್ಣ ಚೇತರಿಸಿಕೊಂಡಿದ್ದ ಈಕೆ, ಅಪಾರ್ಟ್‌ಮೆಂಟ್‌ನ ಕೋಣೆಯಲ್ಲಿ ಅಸ್ವಸ್ಥಗೊಂಡು ಮೃತಪಟ್ಟಿದ್ದಾಳೆ ಎನ್ನಲಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!