Saturday, June 6, 2026
Homeಕರಾವಳಿವಿಶ್ವ ಹಿಂದೂ ಪರಿಷತ್ ಭಜರಂಗದಳ ಸಜೀಪ ವಲಯ : ಹುತಾತ್ಮ ವೀರ ಯೋಧರಿಗೆ ನುಡಿ ನಮನ

ವಿಶ್ವ ಹಿಂದೂ ಪರಿಷತ್ ಭಜರಂಗದಳ ಸಜೀಪ ವಲಯ : ಹುತಾತ್ಮ ವೀರ ಯೋಧರಿಗೆ ನುಡಿ ನಮನ

- Advertisement -
- Advertisement -

ಬಂಟ್ವಾಳ : ವಿಶ್ವ ಹಿಂದೂ ಪರಿಷತ್ ಭಜರಂಗದಳ ಸಜೀಪ ವಲಯ ಇದರ ವತಿಯಿಂದ ಸಜೀಪ ಮೂಡದ ಜಗದ್ಗುರು ಶ್ರೀ ನಾರಾಯಣ ಗುರು ಜ್ಞಾನ ಮಂದಿರದ ಶ್ರೀ ಗುರು ಸಭಾಭವನದಲ್ಲಿ ಚೀನಾದ ಗಡಿಯಲ್ಲಿ ರಾಷ್ಟ್ರ ರಕ್ಷಣೆಗಾಗಿ ಹೋರಾಡಿ ಹುತಾತ್ಮರಾದ ಭಾರತೀಯ ಸೇನೆಯ ವೀರ ಯೋಧರಿಗೆ ನುಡಿನಮನ ಸಲ್ಲಿಸಲಾಯಿತು.


ಭಾರತೀಯ ಸೇನಾ ನಿವೃತ್ತ ಹವಾಲ್ದಾರ್ ಶ್ರೀಯುತ ರಾಜೇಂದ್ರ ಇವರು ನುಡಿ ನಮನ ಸಲ್ಲಿಸಿದರು. ಅಪಾರ ಸಂಖ್ಯೆಯಲ್ಲಿ ಸೇರಿದ್ದ ಕಾರ್ಯಕರ್ತರು ಮತ್ತು ಊರಿನ ನಾಗರಿಕರು ಪುಷ್ಪಾರ್ಚನೆಗೈದು ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಜಗದ್ಗುರು ಜ್ಞಾನ ಮಂದಿರದ ಉಪಾಧ್ಯಕ್ಷ ಯಶವಂತ ದೇರಾಜೆ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖ ಅರುಣ್ ಕುಮಾರ್ ಕುಕ್ಕುದಕಟ್ಟೆ, ವಿಶ್ವ ಹಿಂದೂ ಪರಿಷತ್ ವಿಟ್ಲ ಪ್ರಖಂಡ ಉಪಾಧ್ಯಕ್ಷ ಲೋಹಿತ್ ಪಣೋಲಿಬೈಲು, ವಿಟ್ಲ ಪ್ರಖಂಡ ವಿಶ್ವ ಹಿಂದೂ ಪರಿಷತ್ ಸಹ ಕಾರ್ಯದರ್ಶಿ ದೀಪಕ್ ಕೋಟ್ಯಾನ್ ಸಜೀಪ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಜೀಪ ಮಂಡಲ ಕಾರ್ಯವಾಹ ಗಣೇಶ್ ಕಾರಾಜೆ, ವಿಶ್ವ ಹಿಂದೂ ಪರಿಷತ್ ಸಜೀಪ ವಲಯ ಗೌರವಾಧ್ಯಕ್ಷ ಜಯಪ್ರಕಾಶ್ ಪೆರ್ವ, ವಿಶ್ವ ಹಿಂದೂ ಪರಿಷತ್ ಸಜೀಪ ವಲಯ ಅಧ್ಯಕ್ಷ ಮನೋಹರ್ ಕರ್ಕೇರಾ, ಸಜೀಪ ವಲಯ ಭಜರಂಗದಳ ಸಂಚಾಲಕ ಶರತ್ ಸಜೀಪ ಸೇರಿದಂತೆ ಅನೇಕ ರಾಷ್ಟ ಭಕ್ತ ಬಂಧುಗಳು ಉಪಸ್ಥಿತರಿದ್ದರು.

- Advertisement -

Latest News

error: Content is protected !!