Thursday, June 4, 2026
Homeತಾಜಾ ಸುದ್ದಿವ್ಹೀಲಿಂಗ್​ ಮಾಡುವಾಗ ಬೈಕ್​ಗಳು ಮುಖಾಮುಖಿ ಡಿಕ್ಕಿ, ಮೂವರು ಸ್ಥಳದಲ್ಲೇ ಸಾವು

ವ್ಹೀಲಿಂಗ್​ ಮಾಡುವಾಗ ಬೈಕ್​ಗಳು ಮುಖಾಮುಖಿ ಡಿಕ್ಕಿ, ಮೂವರು ಸ್ಥಳದಲ್ಲೇ ಸಾವು

- Advertisement -
- Advertisement -

ಬೆಂಗಳೂರು: ಬೈಕ್ ವ್ಹೀಲಿಂಗ್ ಮಾಡಲು ಹೋದ ಯುವಕರು, ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ನಗರದ ಯಲಹಂಕದ ಜಿಕೆವಿಕೆ ಬಳಿ ನಡೆದಿದೆ. ಯುವಕರು ಹೆಲ್ಮೆಟ್ ಸಹ ಧರಿಸದಿದ್ದರಿಂದ, ರಸ್ತೆಯ ತುಂಬಾ ರಕ್ತ ಚೆಲ್ಲಿತ್ತು.

ನಾಗವಾರ ಗೋವಿಂದಪುರದ ಮಹ್ಮದ್ ಹದಿ, ಅಹಮದ್ ಖಾನ್ ಮತ್ತು ಸೈಯದ್ ರಿಯಾಜ್ ಮೃತರು.

ಭಾನುವಾರ ರಜೆ ದಿನವಾದ್ದರಿಂದ ಹಾಗೂ ಗ್ರಹಣ ಹಿನ್ನೆಲೆಯಲ್ಲಿ ಸಂಚಾರ ವಿರಳವಾಗಿರುವುದರಿಂದ ಖಾಲಯಿದ್ದ ರಸ್ತೆಯಲ್ಲಿ ವ್ಹೀಲಿಂಗ್​ ಸಾಹಸ ಮೆರೆಯಲು, ಮಸಣ ಸೇರಿದ್ದಾರೆ. ಘಟನಾ ಸ್ಥಳಕ್ಕೆ ಯಲಹಂಕ ಸಂಚಾರಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Latest News

error: Content is protected !!