Thursday, June 4, 2026
Homeತಾಜಾ ಸುದ್ದಿಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿಗೆ ಎಂಡಿ ರೂಪಾ ಮೌದ್ಗಿಲ್ ನೋಟೀಸ್

ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿಗೆ ಎಂಡಿ ರೂಪಾ ಮೌದ್ಗಿಲ್ ನೋಟೀಸ್

- Advertisement -
- Advertisement -

ಬೆಂಗಳೂರು: ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ಅವರಿಗೆ ಕರಕುಶಲ ಅಭಿವೃದ್ಧಿ ನಿಗಮದ ಎಂಡಿ ರೂಪಾ ಮೌದ್ಗಿಲ್ ನೋಟೀಸ್ ನೀಡಿದ್ದಾರೆ.

ನಿಗಮದಿಂದ ಲಕ್ಷಗಟ್ಟಲೆ ಮೌಲ್ಯದ ವಸ್ತುಗಳನ್ನು ಎತ್ತಿಕೊಂಡು ಹೋಗಿದ್ದು ಹಣ ಪಾವತಿಸುವಂತೆ ನೋಟೀಸ್ ನೀಡಲಾಗಿದೆ.‌

3 ಲಕ್ಷದ ಹತ್ತು ಸಾವಿರ ರೂ ಮೌಲ್ಯದ ವಸ್ತುಗಳಿಗೆ ಹಣ ಪಾವತಿಸುವಂತೆ ಎಂಡಿ ರೂಪಾ ಮೌದ್ಗಿಲ್ ನೋಟೀಸ್ ಕೊಟ್ಟಿದ್ದಾರೆ.

ನಿನ್ನೆ ನಿಗಮದ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ವಿರುದ್ಧ ಅಧಿಕಾರ ದುರುಪಯೋಗ, ದುರ್ವರ್ತನೆ ಸೇರಿದಂತೆ ಹದಿನಾರು ಆರೋಪಗಳನ್ನು ಮಾಡಿ ರೂಪಾ ಮೌದ್ಗಿಲ್ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದನಾ ಶರ್ಮ ಅವರಿಗೆ ಆರು ಪುಟಗಳ ದೂರು ಸಲ್ಲಿಸಿದ್ದರು.

ಇತ್ತ ಕರಕುಶಲ ಅಭಿವೃದ್ಧಿ ನಿಗಮದ ಎಂಡಿ ರೂಪಾ ಮೌದ್ಗಿಲ್ ವಿರುದ್ಧ‌ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ಎರಡು ದೂರು ನೀಡಿದ್ದಾರೆ.‌

- Advertisement -

Latest News

error: Content is protected !!