Saturday, May 18, 2024
Homeತಾಜಾ ಸುದ್ದಿಕಚೇರಿಯಲ್ಲಿ ಲಾಡೆನ್‌ ಫೋಟೋ ಇಟ್ಟುಕೊಂಡಿದ್ದ ಸರ್ಕಾರಿ ಅಧಿಕಾರಿ ಅಮಾನತು: ಫೋಟೋ ಕೆಳಗೆ ವಿಶ್ವದ ಶ್ರೇಷ್ಟ ಜೂನಿಯರ್...

ಕಚೇರಿಯಲ್ಲಿ ಲಾಡೆನ್‌ ಫೋಟೋ ಇಟ್ಟುಕೊಂಡಿದ್ದ ಸರ್ಕಾರಿ ಅಧಿಕಾರಿ ಅಮಾನತು: ಫೋಟೋ ಕೆಳಗೆ ವಿಶ್ವದ ಶ್ರೇಷ್ಟ ಜೂನಿಯರ್ ಎಂಜಿನಿಯರ್ ಎಂದು ಬಣ್ಣನೆ

spot_img
- Advertisement -
- Advertisement -

ಉತ್ತರ ಪ್ರದೇಶ: ಒಸಾಮಾ ಬಿನ್ ಲಾಡೆನ್‌ ಫೋಟೋ ತಮ್ಮ ಚೇಂಬರ್‌ನಲ್ಲಿ ಗೋಡೆಗೆ ನೇತು ಹಾಕಿಕೊಂಡಿದ್ದ ಅಧಿಕಾರಿಯನ್ನು ಅಮಾನತು ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶ ರಾಜ್ಯ ಸರಕಾರ ಮಾಲೀಕತ್ವದ ದಕ್ಷಿಣಾಂಚಲ್ ವಿದ್ಯುತ್ ವಿತರಣ ನಿಗಮ ಲಿಮಿಟೆಡ್‌ನಲ್ಲಿ (ಡಿವಿವಿಎನ್ಎಲ್) ಸಬ್ ಡಿವಿಶನಲ್ ಆಫೀಸರ್ (ಎಸ್‌ಡಿಒ) ಆಗಿ ಸೇವೆ ಸಲ್ಲಿಸುತ್ತಿರುವ ರವೀಂದ್ರ ಪ್ರಕಾಶ್ ಗೌತಮ್ ಎಂಬುವವರು ತಮ್ಮ ಚೇಂಬರ್‌ನಲ್ಲಿ ಅಲ್ ಕಾಯಿದಾ ಉಗ್ರವಾದಿ ಸಂಘಟನೆಯ ಮಾಜಿ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ಫೋಟೋವನ್ನು ಗೋಡೆಗೆ ನೇತು ಹಾಕಿಕೊಂಡಿದ್ರು.

ಫೋಟೋ ಕೆಳಗೆ ವಿಶ್ವದ ಶ್ರೇಷ್ಠ ಜೂನಿಯರ್ ಎಂಜಿನಿಯರ್ ಎಂದು ಲಾಡೆನ್‌ನನ್ನು ಬಣ್ಣಿಸಿದ್ದರು. ಅಮಾನತು ಆದೇಶ ಜಾರಿಯಾದ ನಂತರ ಫೋಟೋ ವನ್ನು ಕಚೇರಿಯಿಂದ ತೆರವುಗೊಳಿಸಲಾಗಿದೆ. ಆದರೆ ತನ್ನ ನಡೆಯನ್ನು ರವೀಂದ್ರ ಸಮರ್ಥಿಸಿಕೊಂಡಿದ್ದಾರೆ.

- Advertisement -
spot_img

Latest News

error: Content is protected !!