Thursday, June 4, 2026
Homeಕರಾವಳಿಮಂಗಳೂರುದ್ವೇಷ ಭಾಷಣ ಯಾರೇ ಮಾಡಿದರೂ ಎಫ್ಐಆರ್; ಟಾರ್ಗೆಟ್ ಇಟ್ಟುಕೊಂಡು ಕರಾವಳಿಗೆ ಬರುತ್ತಿಲ್ಲ; ಮಂಗಳೂರಿನಲ್ಲಿ ಸಿಎಂ ಸಿದ್ಧರಾಮಯ್ಯ...

ದ್ವೇಷ ಭಾಷಣ ಯಾರೇ ಮಾಡಿದರೂ ಎಫ್ಐಆರ್; ಟಾರ್ಗೆಟ್ ಇಟ್ಟುಕೊಂಡು ಕರಾವಳಿಗೆ ಬರುತ್ತಿಲ್ಲ; ಮಂಗಳೂರಿನಲ್ಲಿ ಸಿಎಂ ಸಿದ್ಧರಾಮಯ್ಯ ಹೇಳಿಕೆ

- Advertisement -
- Advertisement -

ಮಂಗಳೂರು:ಕರಾವಳಿಗೆ ನಿರಂತರ ಭೇಟಿಯ ಹಿಂದೆ ಯಾವುದೇ ಟಾರ್ಗೆಟ್ ಇಟ್ಟುಕೊಂಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಮಂಗಳೂರಿನಲ್ಲಿ ಇಂದು ಮಾತನಾಡಿದ ಸಿಎಂ, ಆರ್ ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಮೇಲಿನ‌ ಎಫ್ಐಆರ್ ವಿಚಾರವಾಗಿ ಪ್ರತಿಕ್ರಿಯಿಸಿ ಯಾರೇ ದ್ವೇಷದ ಭಾಷಣ ಮಾಡಿದರೂ ಎಫ್ಐಆರ್ ಹಾಕುತ್ತೇವೆ ಎಂದು ಹೇಳಿದ್ದಾರೆ.

ಸಮಾಜದಲ್ಲಿ ದ್ವೇಷ, ಅಶಾಂತಿ ನಿರ್ಮಾಣ ಮಾಡುವುದು ಸರಿಯಲ್ಲ. ಯಾರೇ ಈ ತರಹ ಭಾಷಣ ಮಾಡಿದರೂ ಎಫ್ಐಆರ್ ಆಗುತ್ತದೆ ಎಂದಿರುವ ಸಿಎಂ, ಪ್ರಭಾಕರ ಭಟ್ ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ ಎಂದು ಹೇಳಿದ್ದಾರೆ.

ಇದೇ ವೇಳೆ, ಧರ್ಮಸ್ಥಳದಲ್ಲಿನ ಎಸ್ಐಟಿ ತನಿಖೆ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ತನಿಖೆಗೆ ನಾವು ಮಧ್ಯಪ್ರವೇಶ ಮಾಡುವುದಿಲ್ಲ, ಈ ತಿಂಗಳಾಂತ್ಯದಲ್ಲಿ ಎಸ್ಐಟಿ
ಗೃಹ ಸಚಿವರಿಗೆ ವರದಿ ಕೊಡಬಹುದು ಅಥವಾ ಕೊಡದೆಯೇ ಇರಬಹುದು ನನ್ನ ಬಳಿ ಏನೂ ಹೇಳಿಲ್ಲ ಎಂದಿದ್ದಾರೆ.

- Advertisement -

Latest News

error: Content is protected !!