Thursday, June 4, 2026
Homeತಾಜಾ ಸುದ್ದಿತಮಿಳುನಾಡಿನಲ್ಲಿ ಯಾರಿಗೂ ರಾಮನ ಪರಿಚಯವಿಲ್ಲ: ಕಾಂಗ್ರೆಸ್ ಸಂಸದೆಯ ಹೇಳಿಕೆಗೆ ನೆಟ್ಟಿಗರ ಕ್ಲಾಸ್

ತಮಿಳುನಾಡಿನಲ್ಲಿ ಯಾರಿಗೂ ರಾಮನ ಪರಿಚಯವಿಲ್ಲ: ಕಾಂಗ್ರೆಸ್ ಸಂಸದೆಯ ಹೇಳಿಕೆಗೆ ನೆಟ್ಟಿಗರ ಕ್ಲಾಸ್

- Advertisement -
- Advertisement -

ಚೆನ್ನೈ: ತಮಿಳುನಾಡಿನಲ್ಲಿ ಯಾರಿಗೂ ರಾಮನ ಪರಿಚಯವಿಲ್ಲ ಎಂದು ಕಾಂಗ್ರೆಸ್ ಸಂಸದೆ ಜ್ಯೋತಿಮಣಿ ಹೇಳಿ ಕೊಟ್ಟಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ. ಈ ಹಿನ್ನೆಲೆ ನೆಟ್ಟಿಗರು ಸಂಸದೆ ಹೇಳಿಕೆಗೆ ಆಕ್ರೋಶ ಹೊರಹಾಕುತ್ತಿದ್ದಾರೆ.

ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿರುವ ಜ್ಯೋತಿಮಣಿ, ‘ನಾನು ತಮಿಳುನಾಡಿನವಳು. ನನಗೆ ರಾಮನ ಪರಿಚಯವಿಲ್ಲ. ನೀವು ತಮಿಳುನಾಡಿನಲ್ಲಿ ಯಾರನ್ನಾದರೂ ಕೇಳಿ. ನಾವು ಯಾವುದೇ ರಾಮಮಂದಿರವನ್ನು ನೋಡಿಲ್ಲ’ ಎಂದು ಹೇಳಿಕೆ ಕೊಟ್ಟಿದ್ದಾರೆ.

ಇದಕ್ಕೆ ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಕೆ.ಎಂ.ನಂದಗೋಪಾಲ್ ಎಂಬ ಹೆಸರಿನ ನೆಟ್ಟಿಗ, ತಮಿಳುನಾಡಿನಲ್ಲಿ ರಾಮನಿಗೆ ಅರ್ಪಿತವಾದ ದೇವಾಲಯಗಳನ್ನು ಜ್ಯೋತಿಮಣಿ ಅವರಿಗೆ ನೆನಪಿಸಿದ್ದಾರೆ. ಹಾಗೇ ಹಲವಾರು ಮಂದಿ ಕಮೆಂಟ್ಸ್‌ ಮೂಲಕವೇ ಜ್ಯೋತಿ ಮಣಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

- Advertisement -

Latest News

error: Content is protected !!