Friday, June 5, 2026
Homeಕರಾವಳಿಉಡುಪಿಡಿ.5 ಕರ್ನಾಟಕ ಬಂದ್ ಗೆ ಅವಕಾಶವಿಲ್ಲ, ನ್ಯೂ ಇಯರ್ ನೈಟ್ ಕರ್ಫ್ಯೂ ಇರಲ್ಲ: ಗೃಹ ಸಚಿವ...

ಡಿ.5 ಕರ್ನಾಟಕ ಬಂದ್ ಗೆ ಅವಕಾಶವಿಲ್ಲ, ನ್ಯೂ ಇಯರ್ ನೈಟ್ ಕರ್ಫ್ಯೂ ಇರಲ್ಲ: ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟನೆ

- Advertisement -
- Advertisement -

ಉಡುಪಿ: ಸುಪ್ರೀಂ ಕೋರ್ಟ್ ಆದೇಶದ ಅನುಸಾರ ಡಿ.5 ಕರ್ನಾಟಕ ಬಂದ್ ನಡೆಸಲು ಅವಕಾಶವಿಲ್ಲ. ಆ ದಿನ ಎಲ್ಲಾ ಸರ್ಕಾರಿ ಕಚೇರಿಗಳು ದಿನನಿತ್ಯದಂತೆ ನಡೆಯುತ್ತದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಉಡುಪಿಯಲ್ಲಿ ಮಾತನಾಡಿದ ಅವರು, ಬಂದ್ ಮಾಡಿದ್ರೆ ಸುಪ್ರೀಂ ಆದೇಶ ಉಲ್ಲಂಘನೆ ಆಗುತ್ತೆ. ಬಂದ್ ಮಾಡಬೇಡಿ ಎಂದು ಸಿಎಂ ಜೊತೆ ನಾನೂ ಮನವಿ ಮಾಡ್ತೇನೆ ಎಂದರು.

ಹೊಸ ವರ್ಷಾಚರಣೆ ಮತ್ತು ನೈಟ್ ಕರ್ಫ್ಯೂ ಕುರಿತು ಮಾತನಾಡಿದ ಸಚಿವರು, ನೈಟ್ ಕರ್ಫ್ಯೂ ಬಗ್ಗೆ ಯಾವುದೇ ಸಭೆ ಕರೆದಿಲ್ಲ. ಆದರೆ ಜನ ಸೇರದಂತೆ ನೋಡಿಕೊಳ್ಳಬೇಕು ಎಂದು ತಜ್ಞರು ಹೇಳಿದ್ದಾರೆ. ಇವತ್ತು ಅಥವಾ ನಾಳೆ ಸರ್ಕಾರ ಒಂದು ತೀರ್ಮಾನ ಮಾಡ್ತೇವೆ. ನೈಟ್ ಕರ್ಫ್ಯೂ ಬಗ್ಗೆ ಯಾವುದೇ ಚಿಂತನೆ ಇಲ್ಲ. ಹೊಸ ವರ್ಷಾಚರಣೆಯಲ್ಲಿ ಜನಸಂದಣಿ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ಇದೆ. ನೈಟ್ ಕರ್ಫ್ಯೂ ಹೊರತಾಗಿಯೂ ಕ್ರಮ ಕೈಗೊಳ್ಳಬಹುದಾಗಿದೆ ಹೇಳಿದ್ದಾರೆ.

- Advertisement -

Latest News

error: Content is protected !!