Thursday, June 4, 2026
HomeಕರಾವಳಿKSRTC ನೌಕರರ ಮುಷ್ಕರ ಹಿನ್ನೆಲೆ: ಪುತ್ತೂರಿನಲ್ಲಿ ಬಸ್ ಇಲ್ಲದೇ ಪ್ರಯಾಣಿಕರ ಪರದಾಟ

KSRTC ನೌಕರರ ಮುಷ್ಕರ ಹಿನ್ನೆಲೆ: ಪುತ್ತೂರಿನಲ್ಲಿ ಬಸ್ ಇಲ್ಲದೇ ಪ್ರಯಾಣಿಕರ ಪರದಾಟ

- Advertisement -
- Advertisement -

ಪುತ್ತೂರು: ಸಾರಿಗೆ ನೌಕರರ ಪ್ರತಿಭಟನೆ ಎರಡನೇ ದಿವನೂ ಮುಂದುವರಿದಿದೆ. ನಿನ್ನೆ ಸಹಜ ಸ್ಥಿತಿಯಲ್ಲಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ಓಡಾಟವು ಇಂದು ಕೂಡ ಮುಷ್ಕರ ಮುಂದುವರಿದ ಹಿನ್ನೆಲೆ ಸ್ಥಗಿತಗೊಂಡಿದೆ.

ಪುತ್ತೂರು ಬಸ್ ನಿಲ್ದಾಣದಲ್ಲಿ ಬೆಳಗ್ಗಿನಿಂದಲೇ ಪ್ರಯಾಣಿಕರು ಬಸ್ ಸಿಗದೇ ಬೆಳಗ್ಗಿನಿಂದಲೇ ಪರದಾಡುತ್ತಿದ್ದಾರೆ.

ಮುಕ್ರಂಪಾಡಿ ಕೆಎಸ್‌ಆರ್‌ಟಿಸಿ ಡಿಪೋದಿಂದ ಬಸ್‌ನಿಲ್ದಾಣಕ್ಕೆ ಬರಬೇಕಿದ್ದ ಬಸ್ ನೌಕರರ ಧಿಡೀರ್ ಮುಷ್ಕರದ ಪರಿಣಾಮ ಯಾವುದೇ ಬಸ್ ಗಳು ಬಾರದೆ ಪ್ರಯಾಣಿಕರು ಪರದಾಡುವಂತಾಗಿದೆ.

ದಿಢೀರ್ ಮುಷ್ಕರದಿಂದ ಬೆಳ್ಳಂಬೆಳಗ್ಗೆ ಕೆ.ಎಸ್.ಆರ್.ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿ, ಡಿಪೊ ಮೆನೇಜರ್ ಬಸ್ ನಿಲ್ದಾಣಕ್ಕೆ ಆಗಮಿಸಿ‌ ಪರಿಸ್ಥಿತಿ ಅವಲೋಕಿಸಿದ್ದಾರೆ.

ಮತ್ತೊಂದು ಕಡೆ ಮುಷ್ಕರ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಪುತ್ತೂರಿಗೆ ಕೆ.ಎಸ್.ಆರ್.ಟಿ ಬಸ್ ಇಲ್ಲದೇ ಬಹುತೇಕ ಮಂದಿ ಪ್ರಯಾಣಿಕರು ರೈಲು ಮೂಲಕ ಪುತ್ತೂರಿಗೆ ಆಗಮಿಸಿದ್ದಾರೆ.

- Advertisement -

Latest News

error: Content is protected !!