Saturday, May 25, 2024
Homeತಾಜಾ ಸುದ್ದಿಎನ್‌ಡಿಎ ಎಂದರೆ "ನೋ ಡೇಟಾ ಅವೈಲೆಬಲ್' ಸರ್ಕಾರ ಎಂದು ಅರ್ಥ: ರಾಹುಲ್ ಗಾಂಧಿ ವ್ಯಂಗ್ಯ

ಎನ್‌ಡಿಎ ಎಂದರೆ “ನೋ ಡೇಟಾ ಅವೈಲೆಬಲ್’ ಸರ್ಕಾರ ಎಂದು ಅರ್ಥ: ರಾಹುಲ್ ಗಾಂಧಿ ವ್ಯಂಗ್ಯ

spot_img
- Advertisement -
- Advertisement -

ನವದೆಹಲಿ: ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಎನ್ ಡಿಎ ಸರ್ಕಾರ ಎಂದರೆ ನೋ ಡೇಟಾ ಅವೈಲೆಬಲ್ (ಡೇಟಾ ಲಭ್ಯವಿಲ್ಲದ ಸರ್ಕಾರ) ಎಂದು ವ್ಯಂಗ್ಯವಾಡಿದ್ದಾರೆ.

ಈ ಸರ್ಕಾರ ಯಾವುದೇ ಉತ್ತರವನ್ನೂ ನೀಡುವುದಿಲ್ಲ ಹಾಗೂ ಹೊಣೆಗಾರಿಕೆ ಇಲ್ಲದ ಸರ್ಕಾರವಾಗಿದೆ. ನೋ ಡೇಟಾ ಅವೇಲಬಲ್ (ಎನ್ ಡಿಎ) ಸರ್ಕಾರಕ್ಕೆ ನೀವು ಅದನ್ನು ನಂಬುವುದಷ್ಟೇ ಬೇಕು. ಕೊರೋನಾ ಅವಧಿಯಲ್ಲಿ ಯಾರೂ ಆಮ್ಲಜನಕ ಕೊರತೆಯಿಂದ ಸಾವನ್ನಪ್ಪಿಲ್ಲ. ಕೃಷಿ ಮಸೂದೆಗಳನ್ನು ವಿರೋಧಿಸಿ ನಡೆಸಿದ ಪ್ರತಿಭಟನೆಯಲ್ಲಿ ಯಾರೂ ಸಾವನ್ನಪ್ಪಿಲ್ಲ. ಲಾಕ್ ಡೌನ್ ಅವಧಿಯಲ್ಲಿ ನಡೆದು ತಮ್ಮ ಊರಿಗೆ ಬರುತ್ತಿದ್ದಾಗ ವಲಸಿಗ ಕಾರ್ಮಿಕರು ಯಾರೂ ಸಾವನ್ನಪ್ಪಿಲ್ಲ. ಈ ಸರ್ಕಾರದ ಅವಧಿಯಲ್ಲಿ ಯಾರ ಮೇಲೆಯೂ ಗುಂಪು ಹಲ್ಲೆ ನಡೆದಿಲ್ಲ. ಯಾವುದೇ ಪತ್ರಕರ್ತರನ್ನೂ ಬಂಧಿಸಿಲ್ಲ ಎಂದು ರಾಹುಲ್ ಗಾಂಧಿ ಟ್ವಿಟರ್ ನಲ್ಲಿ ಬರೆದಿದ್ದಾರೆ. 

.

- Advertisement -
spot_img

Latest News

error: Content is protected !!