Wednesday, May 8, 2024
Homeತಾಜಾ ಸುದ್ದಿವಾಣಿಜ್ಯ ನಗರಿ ಮುಂಬೈನಲ್ಲಿ ಕರೆಂಟ್ ಇಲ್ಲ!..ಪವರ್ ಗ್ರಿಡ್ ವೈಫಲ್ಯಕ್ಕೆ ಕಾರಣವೇನು?

ವಾಣಿಜ್ಯ ನಗರಿ ಮುಂಬೈನಲ್ಲಿ ಕರೆಂಟ್ ಇಲ್ಲ!..ಪವರ್ ಗ್ರಿಡ್ ವೈಫಲ್ಯಕ್ಕೆ ಕಾರಣವೇನು?

spot_img
- Advertisement -
- Advertisement -

ಮುಂಬೈ: ವಾಣಿಜ್ಯ ನಗರಿಯಲ್ಲಿ ವಿದ್ಯುತ್ ಸಮಸ್ಯೆ ಎದುರಾಗಿದೆ. ಮುಂಬೈನ ಯಾವುದೇ ಪ್ರದೇಶದಲ್ಲಿ ಕರೆಂಟ್ ಇಲ್ಲ. ಟಾಟಾ ವಿದ್ಯುತ್ ಸರಬರಾಜಿನಲ್ಲಿ ಸಮಸ್ಯೆಯಾಗಿದ್ದು,ಪವರ್ ಗ್ರಿಡ್ ವೈಫಲ್ಯದಿಂದಾಗಿ ಈ ಸಮಸ್ಯೆ ಎದುರಾಗಿದೆ.

ಇಡೀ ಮುಂಬೈ ಜನರ ದಿನನಿತ್ಯದ ಕೆಲಸಕ್ಕೆ ಅಡ್ಡಿಯಾಗಿದ್ದು ಥಾಣೆ, ಮುಂಬೈ, ಮುಂಬೈ ಉಪನಗರ ಮೂರು ಜಿಲ್ಲೆಗಳಲ್ಲಿ ವಿದ್ಯುತ್ ಇಲ್ಲ. ಈ ಬಗ್ಗೆ ಬೃಹತ್ ಮುಂಬೈ ವಿದ್ಯುತ್ ಸರಬರಾಜು ಮತ್ತು ಸಾರಿಗೆ ಸಂಸ್ಥೆ ಟ್ವೀಟ್ ಮಾಡಿ ಮಾಹಿತಿ ನೀಡಿದೆ. ಮುಂಬೈ 24 ಗಂಟೆಗಳ ವಿದ್ಯುತ್ ಗೆ ಹೆಸರುವಾಸಿಯಾಗಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಇಲ್ಲಿ ಈವರೆಗೂ ವಿದ್ಯುತ್ ವ್ಯತ್ಯಯವಾಗಿಲ್ಲ.

- Advertisement -
spot_img

Latest News

error: Content is protected !!