Sunday, May 19, 2024
Homeತಾಜಾ ಸುದ್ದಿಮುಂದಿನ‌ ವರ್ಷದಿಂದ ಇಂಜಿನಿಯರಿಂಗ್ ಕೋರ್ಸ್ ಗೆ ಕಾಮೆಡ್-ಕೆ ಸಿಇಟಿ ಇಲ್ಲ: ಖಾಸಗಿ ಇಂಜಿನಿಯರಿಂಗ್ ಸೀಟು ಶುಲ್ಕ...

ಮುಂದಿನ‌ ವರ್ಷದಿಂದ ಇಂಜಿನಿಯರಿಂಗ್ ಕೋರ್ಸ್ ಗೆ ಕಾಮೆಡ್-ಕೆ ಸಿಇಟಿ ಇಲ್ಲ: ಖಾಸಗಿ ಇಂಜಿನಿಯರಿಂಗ್ ಸೀಟು ಶುಲ್ಕ ಈ ವರ್ಷದಿಂದಲೇ 10% ಹೆಚ್ಚಳ

spot_img
- Advertisement -
- Advertisement -

ಬೆಂಗಳೂರು: ಮುಂದಿನ ವರ್ಷದಿಂದ ಇಂಜಿನಿಯರಿಂಗ್ ‌ಸೀಟುಗಳಿಗೆ ಸರ್ಕಾರಿ ಸಿಇಟಿ ಮಾತ್ರ ನಡೆಯಲಿದ್ದು, ಕಾಮೆಡ್-ಕೆ ಸಿಇಟಿ ರದ್ದಾಗಲಿದೆ.

ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವಥ್ ನಾರಾಯಣ ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಕಟಿಸಿದ್ದಾರೆ.

ಈ ವರ್ಷ ಮಾತ್ರ ಸಿಇಟಿ ಮತ್ತು ಕಾಮೆಡ್-ಕೆ ಪರೀಕ್ಷೆ ಇರಲಿದ

ಮುಂದಿನ ವರ್ಷದಿಂದ ಸಿಇಟಿ ಮಾತ್ರ‌ ನಡೆಯಲಿದ್ದು, ಈ ಬಗ್ಗೆ ರಾಜ್ಯ ಸರ್ಕಾರ ಮತ್ತು ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ ನಡುವೆ ಒಡಂಬಡಿಕೆ ಆಗಲಿದೆ.

ಈ ಮಧ್ಯೆ ಖಾಸಗಿ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ 10% ಫೀಸ್ ಹೆಚ್ಚಳ ಮಾಡಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ.

ಈ ವರ್ಷ ಖಾಸಗಿ ಕಾಲೇಜುಗಳಲ್ಲಿ
ಇಂಜಿನಿಯರಿಂಗ್ ಕೋರ್ಸ್ ಗೆ ಸೇರುವ ವಿದ್ಯಾರ್ಥಿಗಳಿಗೆ 10% ಶುಲ್ಕ ಹೆಚ್ಚಳವಾಗಲಿದೆ.

25% ಶುಲ್ಕ ಹೆಚ್ಚಳಕ್ಕೆ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳು ರಾಜ್ಯ ಸರ್ಕಾರದ ಮುಂದೆ ಪ್ರಸ್ತಾವನೆ ಸಲ್ಲಿಸಿದ್ದವು.‌

- Advertisement -
spot_img

Latest News

error: Content is protected !!