Tuesday, July 14, 2026
Homeಕರಾವಳಿಉಡುಪಿನೂತನ ಸಿಎಂ ಪಟ್ಟಿಯಲ್ಲಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೆಸರು?

ನೂತನ ಸಿಎಂ ಪಟ್ಟಿಯಲ್ಲಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೆಸರು?

- Advertisement -
- Advertisement -

ಬೆಂಗಳೂರು:ಸಿಎಂ ಸ್ಥಾನಕ್ಕೆ ಯಡಿಯೂರಪ್ಪ ಅವರು ರಾಜೀನಾಮೆ ನೀಡಿರುವ ಬೆನ್ನಲ್ಲೇ ಇದೀಗ ಆ ಸ್ಥಾನಕ್ಕೆ ಕರಾವಳಿಯ ಪ್ರಭಾವಿ ಮುಖಂಡರ ಹೆಸರು ಕೇಳಿ ಬರುತ್ತಿದೆ.

ಕುತೂಹಲ ಎಂಬಂತೆ ಸಂಸದ ನಳಿನ್ ಕುಮಾರ್ ಕಟೀಲ್ ದೆಹಲಿ ಪ್ರಯಾಣ ಮಾಡಿದ್ದು, ಬೆಳಗ್ಗಿನ 11.30 ವಿಮಾನದಲ್ಲಿ ಮಂಗಳೂರಿನಿಂದ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ದೆಹಲಿಗೆ ಹೋಗುವ ಮುನ್ನ ನಳಿನ್ ಕುಮಾರ್ ಕಟೀಲ್ ತವರು ಮನೆಯ ಪೂಜಿಸುವ ದೈವಗಳ ಆಶೀರ್ವಾದ ಪಡೆದಿದ್ದಾರೆ. ಅಲ್ಲದೇ ತಾಯಿ ಸುಶೀಲಾವತಿ. ಎನ್. ಶೆಟ್ಟಿಯವರ ಕಾಲು ಮುಟ್ಟಿ ಆಶೀರ್ವಾದ ಪಡೆದು ದೆಹಲಿ ಪ್ರಯಾಣ ಮಾಡಿದ್ದಾರೆ ಎನ್ನಲಾಗಿದೆ.

ಹೀಗಾಗಿ ಹೈಕಮಾಂಡ್ ಆತ್ಯಾಪ್ತರಾಗಿರುವ ನಳಿನ್ ಕುಮಾರ್ ಕಟೀಲ್‌ಗೆ ಕರ್ನಾಟಕ ಮುಖ್ಯಮಂತ್ರಿಯಾಗುವ ಯೋಗ ಇದೆಯಾ ಅನ್ನೋದು ಸದ್ಯ ಬಿಜೆಪಿ ಕಾರ್ಯಕರ್ತರಲ್ಲಿ ಕುತೂಹಲ ಕೆರಳಿಸಿದೆ.

- Advertisement -

Latest News

error: Content is protected !!