Saturday, May 18, 2024
Homeತಾಜಾ ಸುದ್ದಿರವಿ ಡಿ ಚೆನ್ನಣ್ಣನವರ್ ನನ್ನ ಸಹೋದರ ಎಂದು ನಂಬಿಸಿ ಅರ್ಚಕನಿಂದ ವಂಚನೆ !!

ರವಿ ಡಿ ಚೆನ್ನಣ್ಣನವರ್ ನನ್ನ ಸಹೋದರ ಎಂದು ನಂಬಿಸಿ ಅರ್ಚಕನಿಂದ ವಂಚನೆ !!

spot_img
- Advertisement -
- Advertisement -

ಬೆಂಗಳೂರು: ಐಪಿಎಸ್ ಅಧಿಕಾರಿ ರವಿ ಡಿ ಚನ್ನಣ್ಣನವರ್ ಸಹೋದರ ಎಂದು ಹೇಳಿಕೊಂಡು ಆಶ್ರಯ ಯೋಜನೆಯಡಿ ಮನೆ ಕೊಡಿಸುತ್ತೇನೆಂದು ಸಾರ್ವಜನಿಕರಿಗೆ ಅರ್ಚಕನೊಬ್ಬ ವಂಚಸಿ ಲಕ್ಷಾಂತರ ರೂಪಾಯಿ ದೋಚಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಉತ್ತರಹಳ್ಳಿಯ ಆಂಜನೇಯ ದೇಗುಲದ ಪೂಜಾರಿ ಮಂಜುನಾಥ್ ದೇವಾಲಯಕ್ಕೆ ಬರುತ್ತಿದ್ದ ಭಕ್ತರಿಗೆ ಮನೆ ಕೊಡಿಸುವುದಾಗಿ ಹೇಳಿ ವಂಚಿಸಿದ್ದು, ಸುಮಾರು 50 ಜನರಿಂದ ತಲಾ 1.5 ಲಕ್ಷ ರೂಪಾಯಿ ಪಡೆದುಕೊಂಡಿದ್ದಾನೆ ಎನ್ನಲಾಗಿದೆ.

ದೇವಸ್ಥಾನಕ್ಕೆ ಬರುತ್ತಿದ್ದ ಭಕ್ತರಿಗೆ ಆಶ್ರಯ ಮನೆ ನೀಡುವುದಾಗಿ ಹೇಳಿ ಲಕ್ಷಾಂತರ ರೂಪಾಯಿ ಲಪಟಾಯಿಸಿದ್ದಾನೆ. ಉಚಿತ ಮನೆ ಸಿಗುತ್ತದೆ ಎಂದು 50 ಸಾವಿರದಿಂದ 1 ಲಕ್ಷ ರೂ. ವರೆಗೂ ವಸೂಲಿ ಮಾಡಿದ್ದಾನೆ. ಪರಿಚಿತರ ಮೂಲಕ ನಿಮಗೆ ತಪ್ಪದೇ ಮನೆ ಕೊಡಿಸುತ್ತೇನೆ ಎಂದು ಆಸೆ ಹುಟ್ಟಿಸುತ್ತಿದ್ದ. ಅರ್ಚಕನ ಮಾತು ನಂಬಿ ದಾಖಲೆ ಕೊಟ್ಟವರು ಲಕ್ಷಾಂತರ ರೂಪಾಯಿ ಹಣ ನೀಡಿದ್ದಾರೆ. ಪ್ರಭಾವಿ ರಾಜಕಾರಣಿಗಳ ಜತೆಗಿರುವ ಫೋಟೋ ಕೂಡ ಇವನ ಬಳಿ ಇರುವುದರಿಂದ ಹಾಗೂ ಅರ್ಚಕನಾಗಿದ್ದ ಕಾರಣ ಈತನನ್ನು ಸಾಕಷ್ಟು ಮಂದಿ ನಂಬಿದ್ದರು ಎನ್ನಲಾಗಿದೆ.

ಈ ವಿಚಾರವನ್ನು ಐಪಿಎಸ್ ಅಧಿಕಾರಿ ರವಿ ಚನ್ನಣ್ಣನವರ್ ಗಮನಕ್ಕೆ ತಂದಾಗ ಅವನು ಯಾರೋ ನನಗೆ ಗೊತ್ತೇ ಇಲ್ಲ, ದೂರು ಕೊಟ್ಟು ಅರೆಸ್ಟ್ ಮಾಡಿಸಿ ಎಂದು ಸಲಹೆ ನೀಡಿದ್ದಾರೆ. ಅರ್ಚಕನ ವಿರುದ್ಧ ವಂಚನೆ ದೂರು ದಾಖಲಾಗಿದ್ದು,ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಅರ್ಚಕ ಮಂಜುನಾಥ್ ನಿಂದ ವಂಚನೆಗೊಳಗಾದವರು ಸುಬ್ರಹ್ಮಣ್ಯಪುರ ಠಾಣೆಯಲ್ಲಿ ದೂರು ದಾಖಲಿಸಿದ್ದು, ಎಫ್‌ಐಆರ್ ದಾಖಲಾಗುತ್ತಿದ್ದಂತೆಯೇ ಅರ್ಚಕ ಎಸ್ಕೇಪ್ ಆಗಿದ್ದಾನೆ.

- Advertisement -
spot_img

Latest News

error: Content is protected !!