ಕೊರೋನಾ ವೈರಸ್ ಮತ್ತು ಲಾಕ್ ಡೌನ್ ಹಿನ್ನೆಲೆಯಲ್ಲಿ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ರೈತರು, ವಲಸೆ ಕಾರ್ಮಿಕರು ಮತ್ತು ಸಣ್ಣ ವ್ಯಾಪಾರಿಗಳಿಗಾಗಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುರುವಾರ ಪರಿಹಾರ ಪ್ಯಾಕೇಜ್ ಅನ್ನು ಪ್ರಕಟಿಸಿದ್ದಾರೆ.
ಮುಂದಿನ ಎರಡು ತಿಂಗಳು ಎಲ್ಲ ವಲಸಿಗರಿಗೆ ಉಚಿತ ಪಡಿತರ ವಿತರಣೆ ಮುಂದುವರೆಯಲಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಯಾವುದೇ ಪಡಿತರ ಕಾರ್ಡ್ ಹೊಂದಿರದ ಹಾಗೂ ಹೊಂದಿರುವ ಎಲ್ಲರಿಗೂ 5 ಕೆ.ಜಿ ಗೋಧಿ/ ಅಕ್ಕಿ ಮತ್ತು ಒಂದು ಕೆ.ಜಿ ಧಾನ್ಯ ವಿತರಣೆ ಮಾಡಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಇದ್ರಿಂದ 8 ಕೋಟಿ ವಲಸೆ ಕಾರ್ಮಿಕರಿಗೆ ನೆರವಾಗಲಿದೆ. ಈ ಬಗ್ಗೆ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಲಾಗಿದೆ. ಇದಕ್ಕಾಗಿ 3500 ಕೋಟಿ ಮೀಸಲಿಡುವುದಾಗಿ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಒಂದು ರಾಷ್ಟ್ರ-ಒಂದು ಪಡಿತರ ಯೋಜನೆ ಜಾರಿಗೆ ಬರಲಿದೆ. ಮಾರ್ಚ್ 2021ರಲ್ಲಿ ಇಂದು ಸಂಪೂರ್ಣ ಜಾರಿಗೆ ಬರಲಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ರೇಷನ್ ಕಾರ್ಡ್ ನ್ನು ದೇಶದ ಯಾವುದೇ ರಾಜ್ಯದಲ್ಲಿ ಬಳಸಬಹುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ರಾಷ್ಟ್ರೀಯ ಪೋರ್ಟಿಬಿಲಿಟಿ ಕಾರ್ಡ್ ಮೂಲಕ ವಿತರಣೆ ಮಾಡಲಾಗುವುದು. ಇದ್ರಿಂದ 67 ಕೋಟಿ ಜನರಿಗೆ ಇದ್ರಿಂದ ಲಾಭವಾಗಲಿದೆ. ಇದಲ್ಲದೆ ವಲಸೆ ಕಾರ್ಮಿಕರು ಹಾಗೂ ನಗರದ ಬಡ ಜನರಿಗೆ ಸುಲಭವಾಗಿ ಬಾಡಿಗೆ ಮನೆ ಸಿಗಲಿ ಎನ್ನುವ ಕಾರಣಕ್ಕೆ ಸರ್ಕಾರ ಮತ್ತೊಂದು ಯೋಜನೆ ಘೋಷಣೆ ಮಾಡಿದೆ. ವಲಸೆ ಕಾರ್ಮಿಕರು ಹಾಗೂ ನಗರ ಪ್ರದೇಶದ ಬಡ ಜನರ ಬಾಡಿಗೆ ಮನೆಯ ಬಾಡಿಗೆ ನಿಗದಿ ಮಾಡುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ಕೈಗಾರಿಕಾ ಸಂಸ್ಥೆಗಳು ತಮ್ಮ ಜಾಗದಲ್ಲಿ ಕಾರ್ಮಿಕರಿಗೆ ಬಾಡಿಗೆ ಮನೆ ನಿರ್ಮಾಣ ಮಾಡಬಹುದು. ಇದಕ್ಕೆ ಕೇಂದ್ರ ಸರ್ಕಾರ ನೆರವು ನೀಡಲಿದೆ.
