Thursday, July 18, 2024
Homeಉದ್ಯಮಮಂಗಳೂರು: ತೇಜಸ್ವಿನಿ ಆಸ್ಪತ್ರೆಯಲ್ಲಿ ವನೋರಾ ಆ್ಯಂಟಿ ಕೋವಿಡ್ ಸೋಂಕು ನಿವಾರಕ ರೋಬೋಟ್ ಲೋಕಾರ್ಪಣೆ

ಮಂಗಳೂರು: ತೇಜಸ್ವಿನಿ ಆಸ್ಪತ್ರೆಯಲ್ಲಿ ವನೋರಾ ಆ್ಯಂಟಿ ಕೋವಿಡ್ ಸೋಂಕು ನಿವಾರಕ ರೋಬೋಟ್ ಲೋಕಾರ್ಪಣೆ

spot_img
- Advertisement -
- Advertisement -

ಮಂಗಳೂರು: ಮಂಗಳೂರು ಮೂಲದ ರೊಬೊಟಿಕ್ಸ್ ಇಂಜಿನಿಯರ್ ಕೃಷ್ಣನ್ ನಂಬಿಯಾರ್ ಅಭಿವೃದ್ಧಿಪಡಿಸಿರುವ 140 ಚದರ ಅಡಿ ಕೋಣೆಯನ್ನು 5 ನಿಮಿಷಕ್ಕಿಂತ ಕಡಿಮೆ ಅವಧಿಯಲ್ಲಿ ಸೋಂಕುರಹಿತಗೊಳಿಸಬಲ್ಲ ‘ವನೋರಾ ರೋಬೋಟ್’ನ್ನು ಮಂಗಳೂರಿನ ತೇಜಸ್ವಿನಿ ಆಸ್ಪತ್ರೆಯಲ್ಲಿ ಆಸ್ಪತ್ರೆಯ ಅಧ್ಯಕ್ಷ ಮತ್ತು ನಿಟ್ಟೆ ವಿಶ್ವವಿದ್ಯಾಲಯದ ಪ್ರೊ ಚಾನ್ಸೆಲರ್ ಡಾ.ಎಂ.ಶಾಂತರಾಮ್ ಶೆಟ್ಟಿ ಲೋಕಾರ್ಪಣೆಗೈದರು.

ರೋಬೋಟ್ ಕುರಿತು

ಕೋವಿಡ್-19 ವಿರುದ್ಧ ಹೋರಾಡುತ್ತಿರುವ ಕೊರೋನಾ ಯೋಧರಿಗೆ ಸಹಾಯವಾಗಲು ವನೊರಾ ರೋಬೋಟ್ ಅನ್ನು ವಿನ್ಯಾಸಗೊಳಿಸಲಾಗಿದೆ. ಇದು ಎಲ್ಲಾ ರೀತಿಯ ಬ್ಯಾಕ್ಟೀರಿಯಾಗಳು, ಶಿಲೀಂಧ್ರಗಳ ಬೀಜಕಗಳು ಮತ್ತು ವಿವಿಧ ರೀತಿಯ ಕರೋನಾ ವೈರಸ್ ಸೇರಿದಂತೆ ಹಲವು ರೀತಿಯ ವೈರಸ್ಗಳು ನಾಶಮಾಡಲು ಹೆಚ್ಚಿನ ಪ್ರಮಾಣದ ಟೈಪ್ ಸಿ ಅಲ್ಟ್ರಾ ವೈಲೆಟ್ ಕಿರಣಗಳನ್ನು (ಸುಮಾರು 300 ಎ / ಟಶಿ ಅನುಮತಿಸುವ ಮಟ್ಟದಲ್ಲಿ) ಚದುರಿಸಲು ಸಂಪೂರ್ಣ ಕ್ರಿಯಾತ್ಮಕ ಮಾನವರಹಿತ ರೋಬಾಟ್ ವೇದಿಕೆಯಾಗಿದೆ.

ವನೋರಾ ರೋಬೋಟ್ 140 ಚದರ ಅಡಿ ಕೋಣೆಯನ್ನು 5 ನಿಮಿಷಕ್ಕಿಂತ ಕಡಿಮೆ ಅವಧಿಯಲ್ಲಿ ಸೋಂಕುರಹಿತಗೊಳಿಸಬಲ್ಲದು ಮತ್ತು ಅದನ್ನು ದೂರದಿಂದಲೇ ನಿಯಂತ್ರಿಸಬಹುದು. ಅದು ಚಲಿಸುವ ನೆಲವನ್ನು ನಿರಂತರವಾಗಿ ಸೋಂಕುರಹಿತಗೊಳಿಸುತ್ತದೆ. ವಿಶೇಷವಾಗಿ ವಿನ್ಯಾಸಗೊಳಿಸಲಾದ ಚಕ್ರಗಳು ವಿಭಿನ್ನ ದಿಕ್ಕುಗಳಲ್ಲಿ ಚಲಿಸಲು ಶಕ್ತವಾಗಿದೆ. ಇದು ಯಾವುದೇ ತಾಂತ್ರಿಕ ಕೌಶಲ್ಯ ಅಥವಾ ಪರಿಣತಿಯಿಲ್ಲದೆ ನಿಯಂತ್ರಿಸಲು ಸುಲಭವಾಗಿದೆ. ಇದರ ಸುರಕ್ಷತಾ ವೈಶಿಷ್ಟ್ಯಗಳು ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ಸ್ವಾಯತ್ತ ಚಲನೆಯನ್ನು ಒಳಗೊಂಡಿರುತ್ತವೆ, ಅದರ ಅಂತರ್ಗತ ಸಂವೇದಕಗಳು ಸಮೀಪದಲ್ಲಿರುವ ಅಡೆತಡೆಗಳನ್ನು ಪತ್ತೆಹಚ್ಚಿ ಅವುಗಳೊಂದಿಗೆ ಹೊಡೆಯುವುದನ್ನು ತಡೆಯುತ್ತದೆ ಎಂದು ರೋಬೋಟ್ ನ ವಿನ್ಯಾಸ ಮಾಡಿರುವ ವನೋರಾ ರೋಬೋಟ್ಸ್ ಪ್ರೈ. ಲಿಮಿಟೆಡ್ನ ಸಂಸ್ಥಾಪಕ ಮತ್ತು ಸಿಇಒ ಕೃಷ್ಣನ್ ನಂಬಿಯಾರ್ ಮಾದ್ಯಮಕ್ಕೆ ಮಾಹಿತಿ ನೀಡಿದರು.

ವನೋರಾ ರೋಬೋಟ್ಸ್ ಮಾಡ್ಯುಲರ್ ವಿನ್ಯಾಸವು ವಿವಿಧ ಕೈಗಾರಿಕೆಗಳು, ಆಸ್ಪತ್ರೆಗಳು, ಹೋಟೆಲ್ ಗಳಲ್ಲಿ, ಮಾಲ್ ಮತ್ತು ಸಾರ್ವಜನಿಕ ಸ್ಥಳಗಳಿಗೆ ತಕ್ಕಂತೆ ಸುಲಭವಾಗಿ ಮಾರ್ಪಡಿಸಬಹುದು ಮತ್ತು ಇದು ತ್ವರಿತವಾಗಿ ಸೋಂಕುಗಳನ್ನೂ ನಾಶ ಮಾಡುತ್ತದೆ ಎಂದರು.

ರೋಬೋಟ್ ಲೋಕಾರ್ಪಣೆ ಮಾತನಾಡಿದ ಡಾ. ಎಂ. ಶಾಂತಾರಾಮ್ ಶೆಟ್ಟಿ, ರೋಬೋಟ್ ಗಳು ಕಳೆದ ದಶಕಗಳ ಶ್ರೇಷ್ಠ ಆವಿಷ್ಕಾರಗಳಾಗಿವೆ ಮತ್ತು ಮಾನವರ ಅನೇಕ ಸವಾಲಿನ ಕಾರ್ಯಗಳನ್ನು ಕೈಗೆತ್ತಿಕೊಂಡಿವೆ. ಕೋವಿಡ್ ಸಾಂಕ್ರಾಮಿಕಕ್ಕೆ ಭಯಪಡುವ ಅಗತ್ಯವಿಲ್ಲ. ಇದು ಕರೋನಾ ವೈರಸ್ ಕುಟುಂಬದ ಹೊಸದಾಗಿ ಪತ್ತೆಯಾದ ಸದಸ್ಯ ಮಾತ್ರ. ನೈರ್ಮಲ್ಯೀಕರಣ, ಸಾಮಾಜಿಕ ಅಂತರ ಮತ್ತು ನಮ್ಮ ಪರಿಸರವನ್ನು ಸ್ವಚ್ಛವಾಗಿರಿಸಿಕೊಳ್ಳುವಂತಹ ಕ್ರಮಗಳ ಮೂಲಕ ನಾವು ಅದನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದು. ಆದ್ದರಿಂದ ನಾವು ಈ ವೈರಸ್ಗೆ ಭಯಪಡುವ ಬದಲು ಅದನ್ನು ಸೋಲಿಸಲು ಹೋರಾಡೋಣ ಎಂದರು.

ವನೋರಾ ರೋಬೋಟ್ಸ್ ಪ್ರೈ.ಲಿ.ನ ಹಾರ್ಡ್ ವೇರ್ ಇಂಜಿನಿಯರ್ ಪ್ರಜ್ವಲ್ ಶೆಟ್ಟಿ ರೋಬೋಟ್ ನ ಪ್ರಾತ್ಯಕ್ಷಿಕೆಯನ್ನು ನೀಡಿದರು, ಸ್ಥಳೀಯ ತಂತ್ರಜ್ಞಾನವನ್ನು ಬಳಸಿಕೊಂಡು ಇದನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಹೇಳಿದರು. ರೂ. 2.5 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ವನೋರಾ ರೋಬೋಟ್ ನ ಮೊದಲ ಮೂಲಮಾದರಿಯನ್ನು 2020 ರ ಮೇ 13 ರ ಬುಧವಾರ ಸಚ್ಚಿದಾನಂದ ಚಾರಿಟೇಬಲ್ ಮೆಡಿಕಲ್ ಟ್ರಸ್ಟ್ನ ವತಿಯಿಂದ ರೋಬೋಟ್ ಸಂಶೋಧಕರ ತವರೂರಾದ ಕಾಸರಗೋಡಿನ ಸರಕಾರಿ ಜಿಲ್ಲಾ ಆಸ್ಪತ್ರೆಗೆ ನೀಡಲಾಗಿದೆ.

ಈ ಸಂದರ್ಭದಲ್ಲಿ ಭಾರತೀಯ ವೈದ್ಯಕೀಯ ಸಂಘದ (ಐಎಂಎ, ಮಂಗಳೂರು ಶಾಖೆಯ) ಮಾಜಿ ಅಧ್ಯಕ್ಷ ಡಾ.ಕೆ.ಆರ್. ಕಾಮತ್, ಬ್ರಿಗೇಡಿಯರ್ ಐ. ಎನ್. ರೈ, ಹೃದಯ ಶಸ್ತ್ರಚಿಕಿತ್ಸಕ ಡಾ.ಜಯಕೃಷ್ಣನ್ ಮತ್ತು ಮೂಳೆ ಶಸ್ತ್ರಚಿಕಿತ್ಸಕ ಡಾ.ಎಂ.ಅಜಿತ್ ಕುಮಾರ್ ವನೋರಾ ರೋಬೋಟ್ಸ್ ಪ್ರೈ.ಲಿ.ನ ವ್ಯವಸ್ಥಾಪಕಿ ಪ್ರೀತಿಕಾ ಪುಜನ್ಗೋಡ್, ಮತ್ತು ಇಂಜಿನಿಯರ್ ಗಳಾದ ಆಕರ್ಷ್ ಶೆಟ್ಟಿ, ರಾಮ್ ಕಿಶೋರ್ ಕೆ ಮತ್ತು ಮಹಿಮ್ ಮೊಂತೇರೋ ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!