Tuesday, July 1, 2025
Homeಉದ್ಯಮನಿರ್ಮಲ ಸೀತಾರಾಮನ್ ಭಾಷಣದ ಸಂಪೂರ್ಣ ಮಾಹಿತಿ ಇಲ್ಲಿದೆ

ನಿರ್ಮಲ ಸೀತಾರಾಮನ್ ಭಾಷಣದ ಸಂಪೂರ್ಣ ಮಾಹಿತಿ ಇಲ್ಲಿದೆ

spot_img
- Advertisement -
- Advertisement -

‘ಆತ್ಮ ನಿರ್ಭರ್ ಭಾರತ್’ ನ ಕನ್ನಡದ ಅರ್ಥ

ಮಂಗಳವಾರ ರಾತ್ರಿ 8 ಗಂಟೆಗೆ ದೇಶವನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿಯವರು 20 ಲಕ್ಷ ಕೋಟಿ ರೂಪಾಯಿ ಮೊತ್ತದ ಬೃಹತ್ ಪ್ಯಾಕೇಜ್ ಘೋಷಿಸಿದ್ದರು. ಇದರ ಸಂಪೂರ್ಣ ವಿವರವನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೀಡಲಿದ್ದಾರೆ ಎಂದು ನರೇಂದ್ರ ಮೋದಿ ತಿಳಿಸಿದ್ದರು. ಅದರಂತೆ ಇಂದು ಸಂಜೆ 4 ಗಂಟೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದು, ಮೋದಿ ಅವರು ತಮ್ಮ ಭಾಷಣದಲ್ಲಿ ಹೇಳಿದ್ದ ಆತ್ಮ ನಿರ್ಭರ್ ಭಾರತದ ಅರ್ಥವನ್ನು ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಯಲ್ಲಿ ಹೇಳಿದ್ದಾರೆ.

ಆದಾಯ ತೆರಿಗೆದಾರರಿಗೆ ಗಿಫ್ಟ್ – MSME ಗಳಿಗೆ ರಿಲೀಫ್

ಆದಾಯ ತೆರಿಗೆದಾರರಿಗೆ ಕೇಂದ್ರ ಸರ್ಕಾರ ಬಂಪರ್ ಉಡುಗೊರೆ ನೀಡಿದೆ. 18 ಸಾವಿರ ಕೋಟಿ ಆದಾಯ ತೆರಿಗೆಯನ್ನು ಕೇಂದ್ರ ಸರ್ಕಾರ ವಾಪಸ್ ಮಾಡಿದೆ. ಸುದ್ದಿಗೋಷ್ಠಿ ನಡೆಸುತ್ತಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಈ ವಿಷ್ಯ ಹೇಳಿದ್ದಾರೆ. 41 ಕೋಟಿ ಜನ್ ಧನ್ ಯೋಜನೆಗೆ ಹಣ ವರ್ಗಾವಣೆ ಆಗಿದೆ ಎಂದಿದ್ದಾರೆ. ಎಂಎಸ್‌ಎಂಇ ಕಂಪನಿಗಳಿಗೆ 3 ಲಕ್ಷ ಕೋಟಿ ರೂಪಾಯಿ ಸಾಲ ನೀಡುವುದಾಗಿ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಸಣ್ಣ ಕೈಗಾರಿಕೆಗಳಿಗೆ 3 ಲಕ್ಷ ಕೋಟಿ ರೂಪಾಯಿ ಸಾಲ ನೀಡಲಾಗುವುದು. 45 ಲಕ್ಷ ಸಣ್ಣ ಕೈಗಾರಿಕೆಗಳಿಗೆ ಇದ್ರಿಂದ ಲಾಭವಾಗಲಿದೆ. 100 ಕೋಟಿ ವಹಿವಾಟು ಇರುವ ಕೈಗಾರಿಕೆಗಳಿಗೆ ಇದ್ರಿಂದ ಅನುಕೂಲವಾಗಲಿದೆ. ಎಂಎಸ್ ಎಂಇಗಳಿಗೆ 6 ವಿಧಾನದಲ್ಲಿ ರಿಲೀಫ್ ನೀಡಲಾಗಿದೆ. ಯಾವುದೇ ಅಡಮಾನವಿಲ್ಲದೆ ಸಾಲ ನೀಡಲು ನಿರ್ಧರಿಸಲಾಗಿದೆ.

ಸಣ್ಣ, ಅತಿ ಸಣ್ಣ, ಮಧ್ಯಮ ಕಂಪನಿಗಳಿಗೆ ʼಖುಷಿ ಸುದ್ದಿʼ

ಎಂಎಸ್‌ಎಂಇಗಳು ಒಳ್ಳೆ ಕೆಲಸ ಮಾಡ್ತಿವೆ. ಮುಂದೆ ಹೋಗುವ ಪ್ರಯತ್ನ ನಡೆಸುತ್ತಿವೆ. ಆದ್ರೆ ಹಣದ ಸಮಸ್ಯೆ ಅವರಿಗೆ ಎದುರಾಗುತ್ತಿತ್ತು. ಆದ್ರೀಗ ಎಂಎಸ್‌ಎಂಇ ಕಂಪನಿಗಳಿಗೆ ಕೇಂದ್ರ ಸರ್ಕಾರ ನೆರವಾಗ್ತಿದೆ. ಮಧ್ಯಮ, ಸಣ್ಣ, ಅತಿ ಸಣ್ಣ ಕಂಪನಿಗಳು ನಿಟ್ಟುಸಿರು ಬಿಡಬಹುದು. ಸಾಲ ಮರುಪಾವತಿಗೆ 4 ವರ್ಷ ಅವಕಾಶ ಸಿಗಲಿದೆ. ಸಣ್ಣ ಉದ್ಯಮಕ್ಕೆ 20 ಸಾವಿರ ಕೋಟಿ ರೂ. ನೆರವು ನೀಡಲಿದೆ. ಬ್ಯಾಂಕ್ ನೀಡುವ ಸಾಲಕ್ಕೆ ಸರ್ಕಾರ ಗ್ಯಾರಂಟಿ ನೀಡಲಿದೆ. 12 ತಿಂಗಳವರೆಗೆ ಯಾವುದೇ ಮರು ಪಾವತಿ ನಿಯಮವಿರುವುದಿಲ್ಲ. ಉತ್ಪಾದನೆ ಹೆಚ್ಚಿಸಿಕೊಳ್ಳಲು 10 ಸಾವಿರ ಕೋಟಿ ರೂ. ನೀಡಲಿದೆ. ಅಕ್ಟೋಬರ್ 31ರವರೆಗೆ ಸಾಲ ಪಡೆಯಬಹುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಹಾಗೆ ಸಣ್ಣ ಉದ್ಯಮಿಗಳು ಸಂಬಳ ನೀಡಲು ಬಯಸಿದ್ರೆ ತಕ್ಷಣ ಸಾಲ ನೀಡಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಸಂಬಳದಾರರಿಗೆ ನೆಮ್ಮದಿ ನೀಡಿದ ‘ಕೇಂದ್ರ ಸರ್ಕಾರ’

ಇಪಿಎಫ್ ಹಣ ಪಾವತಿ ಯೋಜನೆಯನ್ನು ಇನ್ನೂ ಮೂರು ತಿಂಗಳ ಕಾಲ ವಿಸ್ತರಿಸಲಾಗಿದೆ. 15 ಸಾವಿರಕ್ಕಿಂತ ಕಡಿಮೆ ಸಂಬಳದವರ ಇಪಿಎಫ್ ಹಣವನ್ನು ಸರ್ಕಾರವೇ ಪಾವತಿಸಲಿದೆ. ತಕ್ಷಣ ಇಪಿಎಫ್ ನೀಡುವುದಾಗಿ ನಿರ್ಮಲಾ ಸೀತಾರಾಮ್ ಹೇಳಿದ್ದಾರೆ. ಇಪಿಎಫ್ ಪಾವತಿ ಮಿತಿಯಲ್ಲೂ ಇಳಿಕೆ ಮಾಡಿದೆ. ಉಳಿದ ಸಂಬಳದಾರರ ಇಪಿಎಫ್ ಶೇಕಡಾ 12ರಿಂದ ಶೇಕಡಾ 10ಕ್ಕೆ ಇಳಿಕೆಯಾಗಿದೆ. ಕಂಪನಿ ಹಾಗೂ ನೌಕರರ ಪಾಲನ್ನು ಸರ್ಕಾರ ಪಾವತಿಸಲಿದೆ.

ಸರ್ಕಾರಿ ಗುತ್ತಿಗೆದಾರರಿಗೆ ಬಿಗ್ ರಿಲೀಫ್

ಸರ್ಕಾರಿ ಗುತ್ತಿಗೆದಾರರಿಗೆ ನೆಮ್ಮದಿ ಸುದ್ದಿ ನೀಡಲಾಗಿದೆ. ಬಾಕಿ ಉಳಿಸಿಕೊಳ್ಳಲು 6 ತಿಂಗಳು ಹೆಚ್ಚುವರಿ ಅವಕಾಶ ನೀಡಲಾಗಿದೆ. ಗುತ್ತಿಗೆದಾರರು ನೀಡಿದ ಗ್ಯಾರಂಟಿಯನ್ನು ವಾಪಸ್ ಮಾಡಬೇಕು. ಹಂತ ಹಂತವಾಗಿ ಕಾಮಗಾರಿ ಮುಗಿದ ಮೇಲೆ ಬ್ಯಾಂಕ್ ಗೆ ಗ್ಯಾರಂಟಿ ವಾಪಸ್ ನೀಡಬೇಕೆಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಕೊರೊನಾ ವೈರಸ್ ನೈಸರ್ಗಿಕ ವಿಕೋಪವೆಂದು ಪರಿಗಣಿಸಲು ಸರ್ಕಾರ ಮುಂದಾಗಿದೆ. ಇದ್ರ ಮೂಲಕ ರಿಯಲ್ ಎಸ್ಟೇಟ್ ಗಳಿಗೆ ನೆಮ್ಮದಿ ನೀಡಲು ನಿರ್ಧರಿಸಲಾಗಿದೆ. ಕೇಂದ್ರ ನಗರಾಭಿವೃದ್ಧಿಯಿಂದ ಎಲ್ಲ ರಾಜ್ಯಗಳಿಗೆ ಸೂಚನೆ ನೀಡಲಾಗಿದೆ. ಬಾಕಿ ಉಳಿದಿರುವ ಯೋಜನೆ ಮುಗಿಸಲು 6 ತಿಂಗಳ ಅವಕಾಶ ನೀಡಲಾಗಿದೆ. ಕೇಂದ್ರ ಸರ್ಕಾರ ಟಿಡಿಎಸ್, ಟಿಸಿಎಸ್ ಗಳನ್ನು ಶೇಕಡಾ25ರಷ್ಟು ಕಡಿತ ಮಾಡಿದೆ. ನಾಳೆಯಿಂದ ಮಾರ್ಚ್ 31, 2021ರವರೆಗೆ ಇದು ಜಾರಿಯಲ್ಲಿರಲಿದೆ. 

- Advertisement -
spot_img

Latest News

error: Content is protected !!