Friday, June 5, 2026
Homeಕರಾವಳಿದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎನ್.ಐ.ಎ ದಾಳಿ ಪ್ರಕರಣ : ನಾಲ್ಕು ಸ್ಥಳಗಳಲ್ಲಿ ಎನ್.ಐ.ಎ ದಾಳಿ ಮುಕ್ತಾಯ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎನ್.ಐ.ಎ ದಾಳಿ ಪ್ರಕರಣ : ನಾಲ್ಕು ಸ್ಥಳಗಳಲ್ಲಿ ಎನ್.ಐ.ಎ ದಾಳಿ ಮುಕ್ತಾಯ

- Advertisement -
- Advertisement -

ಪುತ್ತೂರು : ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧ ಇಂದು ಬೆಳಗ್ಗೆ ದಕ್ಷಿಣ ಕನ್ನಡ ಜಿಲ್ಲೆಯ ಸೇರಿದಂತೆ ಹಲವೆಡೆ ದಾಳಿ ಮಾಡಿದ್ದ ಎನ್.ಐ.ಎ ಅಧಿಕಾರಿಗಳು.

ಇನ್ನೂ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ , ಬೆಳ್ಳಾರೆ , ನೆಲ್ಯಾಡಿಯಲ್ಲಿ ಎನ್.ಐ.ಎ ಅಧಿಕಾರಿಗಳ ದಾಳಿ ಮಾಡಿದ್ದು ಇದೀಗ ದಾಳಿ ಮುಕ್ತಾಯಗೊಳಿಸಿ ಅಧಿಕಾರಿಗಳು ವಾಪಸ್ ತೆರಳಿದ್ದಾರೆ.

ಬೆಳ್ಳಾರೆಯ ನಿಷೇಧಿತ ಪಿಎಫ್ಐ ಮುಖಂಡರಾದ ಶಾಫಿ ಬೆಳ್ಳಾರೆ , ಸುಳ್ಯದ ಇಕ್ಬಾಲ್ ಬೆಳ್ಳಾರೆ, ಸುಳ್ಯದ  ಇಬ್ರಾಹಿಂ ಶಾ ನನ್ನು ಎನ್.ಐ.ಎ ಅಧಿಕಾರಿಗಳು ನಿವಾಸದ ಮೇಲೆ ದಾಳಿ ಮಾಡಿ ಬಂಧಿಸಿ ಬೆಂಗಳೂರು ಕಚೇರಿಗೆ ತನಿಖೆಗಾಗಿ ಕರೆದುಕೊಂಡು ಹೋಗಿದ್ದಾರೆ.

ಪ್ರವೀಣ್ ನೆಟ್ಟಾರು ಹತ್ಯೆ ಸಂಬಂಧ ಬಂಟ್ವಾಳದ ಶರತ್ ಮಡಿವಾಳ ಕೊಲೆ ಪ್ರಕರಣದ ಆರೋಪಿ ಶಾಧಿಕ್ ಅತ್ತಾಜೆ ನೆಲ್ಯಾಡಿ ನಿವಾಸದ ಮೇಲೂ ಎರಡು ವಾಹನದಲ್ಲಿ ಬಂದು 14 ಮಂದಿ ಎನ್.ಐ.ಎ ಅಧಿಕಾರಿಗಳು ದಾಳಿ ಮಾಡಿ ದಾಖಲೆಗಳನ್ನು ವಶಪಡಿಸಿಕೊಂಡು ವಾಪಸ್ ತೆರಳಿದ್ದಾರೆ.

ಒಟ್ಟು 15 ವಾಹನಗಳಲ್ಲಿ 9 ಎನ್.ಐ.ಎ ಅಧಿಕಾರಿಗಳ ತಂಡ ಇಂದು ದಕ್ಷಿಣ ಕನ್ನಡದ ನಾಲ್ಕು ಸ್ಥಳಗಳಲ್ಲಿ ದಾಳಿ ಕಾರ್ಯಾಚರಣೆ ನಡೆಸಿದ್ದಾರೆ.

- Advertisement -

Latest News

error: Content is protected !!