Thursday, March 28, 2024
Homeಅಪರಾಧಬೆಳ್ಳಾರೆ : ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ, ಮೂವರು ನಿಷೇಧಿತ ಪಿಎಫ್ಐ ಮುಖಂಡರನ್ನು ಬಂಧಿಸಿದ...

ಬೆಳ್ಳಾರೆ : ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ, ಮೂವರು ನಿಷೇಧಿತ ಪಿಎಫ್ಐ ಮುಖಂಡರನ್ನು ಬಂಧಿಸಿದ ಎನ್.ಐ.ಎ ತಂಡ

spot_img
- Advertisement -
- Advertisement -

ಸುಳ್ಯ : ಪ್ರವೀಣ್ ನೆಟ್ಟಾರು ಹತ್ಯೆ ಸಂಬಂದಿಸಿದಂತೆ ಇಂದು ಬೆಳಗ್ಗೆ ಎನ್.ಐ.ಎ ತಂಡ ಮೂವರು ನಿಷೇಧಿತ ಪಿಎಫ್ಐ ಮುಖಂಡರನ್ನು ಬಂಧಿಸಿ ಕರೆದೊಯ್ಯುದಿದ್ದಾರೆ.

ನಿಷೇಧಿತ ಪಿಎಫ್ಐ ಮುಖಂಡರಾದ ಬೆಳ್ಳಾರೆಯ ಶಾಫಿ ಬೆಳ್ಳಾರೆ, ಇಕ್ಬಾಲ್ ಬೆಳ್ಳಾರೆ , ಸುಳ್ಯದ ಇಬ್ರಾಹಿಂ ಷಾ ನನ್ನು ಇಂದು ಬೆಳಗ್ಗೆ ಮೂರು ಗಂಟೆಗೆ ಕೋರ್ಟ್ ನಿಂದ ಸರ್ಚ್‌ ವಾರೆಂಟ್ ಪಡೆದು ಎನ್.ಐ.ಎ ತಂಡ ಬೆಳಗ್ಗೆ ಮೂರು ಗಂಟೆಗೆ ದಾಳಿ ಮಾಡಿ ಬಂಧಿಸಿ ತನಿಖೆಗಾಗಿ ಕರೆದುಕೊಂಡುಹೋಗಿದ್ದಾರೆ.

ಇನ್ನೂ ಈ ಪ್ರಕರಣ ಸಂಬಂಧ ಶರತ್ ಮಾಡಿಮಾಳ ಕೊಲೆ ಪ್ರಕರಣದ ಆರೋಪಿಯಾಗಿರುವ ನೆಲ್ಯಾಡಿ ನಿವಾಸಿ ಶಾಧಿಕ್ ಅತ್ತಾಜೆಯ ಮನೆ ಮೇಲೆ ಕೂಡ ಎನ್.ಐ.ಎ ದಾಳಿ ಮಾಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಸುಮಾರು 15 ವಾಹನದಲ್ಲಿ ಬಂದ 9 ಎನ್.ಐ.ಎ ತಂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

- Advertisement -
spot_img

Latest News

error: Content is protected !!