Sunday, June 7, 2026
Homeಅಪರಾಧಜಮ್ಮು ಕಾಶ್ಮೀರದ 14 ಜಿಲ್ಲೆಗಳ 45 ಸ್ಥಳಗಳಲ್ಲಿ ಎನ್ ಐಎ ದಾಳಿ:ಭಯೋತ್ಪಾದಕ ನಿಧಿ ಪ್ರಕರಣ

ಜಮ್ಮು ಕಾಶ್ಮೀರದ 14 ಜಿಲ್ಲೆಗಳ 45 ಸ್ಥಳಗಳಲ್ಲಿ ಎನ್ ಐಎ ದಾಳಿ:ಭಯೋತ್ಪಾದಕ ನಿಧಿ ಪ್ರಕರಣ

- Advertisement -
- Advertisement -

ಜಮ್ಮು : ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಅತಿದೊಡ್ಡ ಕಾರ್ಯಾಚರಣೆಯೊಂದರಲ್ಲಿ, ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಭಯೋತ್ಪಾದಕ ನಿಧಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರಾಡಳಿತ ಪ್ರದೇಶದ 14 ಜಿಲ್ಲೆಗಳ 45 ಸ್ಥಳಗಳಲ್ಲಿ ದಾಳಿ ನಡೆಸಿದೆ.

ದೋಡಾ, ಕಿಶ್ತ್ವಾರ್, ರಂಬನ್, ಅನಂತನಾಗ್, ಬುಡ್ಗಾಮ್, ರಾಜೌರಿ, ದೋಡಾ ಮತ್ತು ಶೋಪಿಯಾನ್ ಸೇರಿದಂತೆ ಇತರೆಡೆಗಳಲ್ಲಿ ದಾಳಿಗಳನ್ನು ನಡೆಸಲಾಗುತ್ತಿದೆ.
ಜಮಾತ್-ಎ-ಇಸ್ಲಾಮಿ (ಜೆಐಐ) ಸದಸ್ಯರ ಮನೆ, ಗುಲ್ ಮೊಹಮ್ಮದ್ ವಾರ್ ಮೇಲೆ ದಾಳಿ ನಡೆಸಲಾಗಿದೆ.

ಜುಲೈ 10 ರಂದು ಭಯೋತ್ಪಾದಕ ನಿಧಿಯ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರದಾದ್ಯಂತ ಆರು ಜನರನ್ನು ಎನ್ ಐಎ ಬಂಧಿಸಿತ್ತು. ಭಯೋತ್ಪಾದಕ ಸಂಪರ್ಕ ಹೊಂದಿದ್ದಕ್ಕಾಗಿ ಜಮ್ಮು ಕಾಶ್ಮೀರ ಸರ್ಕಾರದ ಹನ್ನೊಂದು ಉದ್ಯೋಗಿಗಳನ್ನು ವಜಾ ಮಾಡಿದ ಒಂದು ದಿನದ ನಂತರ ದಾಳಿಗಳು ನಡೆದಿದ್ದವು. ವಜಾಗೊಳಿಸಿದವರಲ್ಲಿ ಭಯೋತ್ಪಾದಕ ಸಂಘಟನೆ ಹಿಜ್ಬುಲ್ ಮುಜಾಹಿದ್ದೀನ್ ಸಂಸ್ಥಾಪಕ ಸೈಯದ್ ಸಲಾಹುದ್ದೀನ್ ಅವರ ಇಬ್ಬರು ಪುತ್ರರು ಸೇರಿದ್ದಾರೆ.

- Advertisement -

Latest News

error: Content is protected !!