Wednesday, October 21, 2026
Homeಶಿವಮೊಗ್ಗಶಿವಮೊಗ್ಗ ದಸರಾ ಜಂಬೂಸವಾರಿಯಲ್ಲಿ ದುರಂತ:ದಾರಿ ತಪ್ಪಿದ ‘ಸೋಮಣ್ಣ’ ಆನೆ, ಅಂಬಾರಿಗೆ ಹಾನಿ, ವಾಹನಗಳು ಜಖಂ

ಶಿವಮೊಗ್ಗ ದಸರಾ ಜಂಬೂಸವಾರಿಯಲ್ಲಿ ದುರಂತ:ದಾರಿ ತಪ್ಪಿದ ‘ಸೋಮಣ್ಣ’ ಆನೆ, ಅಂಬಾರಿಗೆ ಹಾನಿ, ವಾಹನಗಳು ಜಖಂ

- Advertisement -
- Advertisement -

ಶಿವಮೊಗ್ಗ ದಸರಾ ಮಹೋತ್ಸವದ ವೇಳೆ ಆಘಾತಕಾರಿ ಘಟನೆಯೊಂದು ನಡೆದಿದ್ದು, ಜಂಬೂಸವಾರಿಯಲ್ಲಿ ಅಂಬಾರಿ ಹೊತ್ತಿದ್ದ ‘ಸೋಮಣ್ಣ’ ಎಂಬ ಆನೆ ದಿಢೀರ್ ದಾರಿ ತಪ್ಪಿ ರೊಚ್ಚಿಗೆದ್ದ ಪರಿಣಾಮ ಜಂಬೂಸವಾರಿಯು ಅರ್ಧದಲ್ಲೇ ಮೊಟಕುಗೊಂಡಿದೆ.

ಅಂಬಾರಿ ಹೊತ್ತು ಸಾಗುತ್ತಿದ್ದ ಸೋಮಣ್ಣ ಆನೆಯು ಸ್ವಲ್ಪ ದೂರ ಸಾಗುತ್ತಿದ್ದಂತೆ ಇದ್ದಕ್ಕಿದ್ದಂತೆ ವಿಚಲಿತಗೊಂಡು ದಾರಿ ತಪ್ಪಿತು. ಆನೆಯ ಅನಿರೀಕ್ಷಿತ ವರ್ಟನೆಯಿಂದ ಕಂಗೆಟ್ಟ ಅರಣ್ಯ ಸಿಬ್ಬಂದಿ ಹಾಗೂ ಮಾವುತರು ಅದನ್ನು ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು. ಈ ಗೊಂದಲದ ವಾತಾವರಣದಲ್ಲಿ ಆನೆಯು ರಸ್ತೆಯಲ್ಲಿ ಸಾಗುತ್ತಿದ್ದ ಒಂದು ಕಾರು ಹಾಗೂ ಎರಡು-ಮೂರು ಬೈಕ್‌ಗಳನ್ನು ಜಖಂಗೊಳಿಸಿತು.

ಈ ಅನಿರೀಕ್ಷಿತ ಅವಘಡದಿಂದ ಆನೆಯ ಮೇಲಿದ್ದ ಚಾಮುಂಡೇಶ್ವರಿ ಅಂಬಾರಿ ಹಾಗೂ ಅದರ ಕೆಳಗಿನ ಅಲಂಕಾರಿಕ ಮಂಟಪಕ್ಕೆ ಸಂಪೂರ್ಣ ಹಾನಿಯಾಗಿದೆ ಎಂದು ತಿಳಿದುಬಂದಿದೆ. ಆನೆಯು ಒಮ್ಮೆಲೆ ಹೆದರಿ ಅತ್ತಿಂದಿತ್ತ ಓಡಾಡಲು ಯತ್ನಿಸಿದ್ದರಿಂದ ಸ್ಥಳದಲ್ಲಿ ಸೇರಿದ್ದ ಸಾರ್ವಜನಿಕರು ಭಯಭೀತರಾಗಿ ದಿಕ್ಕಾಪಾಲಾಗಿ ಓಡಿದ್ದಾರೆ. ಇದರಿಂದ ಜನದಟ್ಟಣೆಯಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಕೂಡಲೇ ಎಚ್ಚೆತ್ತ ಅರಣ್ಯ ಸಿಬ್ಬಂದಿ ಹಾಗೂ ಮಾವುತರು ಹೆಚ್ಚಿನ ಸಾಹಸ ಪಟ್ಟು ಆನೆಯನ್ನು ಹತೋಟಿಗೆ ತರಲು ಹಾಗೂ ಸುರಕ್ಷಿತವಾಗಿ ಸೆರೆಹಿಡಿಯಲು ಕಾರ್ಯಾಚರಣೆ ಮುಂದುವರೆಸಿದ್ದಾರೆ. ಈ ಅನಿರೀಕ್ಷಿತ ಘಟನೆಯಿಂದಾಗಿ ಈ ಬಾರಿಯ ಶಿವಮೊಗ್ಗ ದಸರಾ ಜಂಬೂಸವಾರಿಯು ಅಪೂರ್ಣಗೊಂಡು ಅರ್ಧದಲ್ಲೇ ಮೊಟಕುಗೊಂಡಿದೆ.

- Advertisement -

Latest News

error: Content is protected !!