Thursday, June 4, 2026
Homeಕರಾವಳಿಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ; ಐವರು ಆರೋಪಿಗಳ ಪತ್ತೆಗೆ ನೆರವಾಗುವಂತೆ ಸಾರ್ವಜನಿಕರಿಗೆ ಎನ್ ಐಎ...

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ; ಐವರು ಆರೋಪಿಗಳ ಪತ್ತೆಗೆ ನೆರವಾಗುವಂತೆ ಸಾರ್ವಜನಿಕರಿಗೆ ಎನ್ ಐಎ ಮನವಿ

- Advertisement -
- Advertisement -

ಸುಳ್ಯ: ಬಿಜೆಪಿ ಕಾರ್ಯಕರ್ತನಾಗಿದ್ದ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಐವರು ಆರೋಪಿಗಳ ಪತ್ತೆಗೆ ಸಹಕರಿಸಲು ಸಾರ್ವಜನಿಕರಿಗೆ ಮತ್ತೊಮ್ಮೆ ರಾಷ್ಟ್ರೀಯ ತನಿಖಾ ದಳ ಮನವಿ ಮಾಡಿದೆ.

ಆರೋಪಿಗಳ ಸುಳಿವು ಸಿಕ್ಕಿದಲ್ಲಿ 9497715294 ವಾಟ್ಸಪ್ ಸಂಖ್ಯೆಯನ್ನು ಸಂಪರ್ಕ ಮಾಡುವಂತೆ ಎನ್ ಐಎ ಮನವಿ ಮಾಡಿದ್ದು, ಮಾಹಿತಿ ನೀಡಿದವರಿಗೆ ಸೂಕ್ತ ಬಹುಮಾನ ನೀಡುವುದಾಗಿಯೂ ಪ್ರಕಟಣೆ ಮಾಡಿದೆ.

ಐವರು ಆರೋಪಿಗಳಾದ ಮೊಹಮ್ಮದ್ ಶರೀಫ್ ಕೊಡಾಜೆ, ಎಂ.ಡಿ. ಮುಸ್ತಫ, ಅಬೂಬಕ್ಕರ್ ಸಿದ್ದಿಕ್, ಮಸೂದ್ ಅಗ್ನಾಡಿ ಮತ್ತು ಉಮ್ಮರ್ ಫಾರೂಕ್ ಎನ್ ಐಎ ವಾಂಟೆಡ್ ಲಿಸ್ಟ್ ನಲ್ಲಿ ಇದ್ದಾರೆ.

ಕಳೆದ ವರ್ಷದ ಜುಲೈ 26ರಂದು ರಾತ್ರಿ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಪ್ರವೀಣ್ ನೆಟ್ಟಾರು ಹತ್ಯೆಯಾಗಿತ್ತು.

- Advertisement -

Latest News

error: Content is protected !!