Thursday, June 4, 2026
Homeಕರಾವಳಿಪುತ್ತೂರು: ಮತ್ತೋರ್ವ ಹಿಂದೂ ಸಂಘಟನೆ ಕಾರ್ಯಕರ್ತನಿಗೆ ಗಡಿಪಾರು ನೋಟೀಸ್

ಪುತ್ತೂರು: ಮತ್ತೋರ್ವ ಹಿಂದೂ ಸಂಘಟನೆ ಕಾರ್ಯಕರ್ತನಿಗೆ ಗಡಿಪಾರು ನೋಟೀಸ್

- Advertisement -
- Advertisement -

ಪುತ್ತೂರು: ಹಿಂದೂ ಸಂಘಟನೆಯ ಮತ್ತೋರ್ವ ಕಾರ್ಯಕರ್ತರೊಬ್ಬರಿಗೆ ಪುತ್ತೂರು ಸಹಾಯಕ ಆಯುಕ್ತರಿಂದ ಗಡಿಪಾರು ನೋಟಿಸ್ ನೀಡಲ್ಪಟ್ಟಿದೆ.

ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ನಿವಾಸಿಯಾಗಿರುವ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತ ಪ್ರವೀಶ್ ಕುಮಾರ್ ನಾಯರ್ ಎಂಬವರಿಗೆ ಯಾಕೆ ಗಡಿಪಾರು ಮಾಡಬಾರದು ಎಂದು ಕಾರಣ ಕೇಳಿ ನೋಟಿಸ್ ನೀಡಲಾಗಿದೆ.

ಎರಡು ಪ್ರಕರಣದಲ್ಲಿ ಆರೋಪಿಯಾಗಿದ್ದ ಪ್ರವೀಶ್ ಕುಮಾರ್ ಗೆ ಡಿಸೆಂಬರ್ 20 ರಂದು ಸಹಾಯಕ ಆಯುಕ್ತರ ನ್ಯಾಯಾಲಯದ ಮುಂದೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ.

ಸದ್ಯಕ್ಕೆ ಪ್ರವೀಶ್ ಕುಮಾರ್ ನಾಯರ್ ಅಯ್ಯಪ್ಪ ಮಾಲಾಧಾರಿಯಾಗಿದ್ದು, ನೋಟೀಸ್ ನೀಡಿರುವ ಕ್ರಮಕ್ಕೆ
ಹಿಂದೂ ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿದೆ.

ಕಳೆದ ತಿಂಗಳು ಕೂಡಾ ಕೆಲವು ಹಿಂದೂ ಸಂಘಟನೆಗಳ ಕಾರ್ಯಕರ್ತರಿಗೆ ಗಡಿಪಾರು ನೋಟೀಸ್ ನೀಡಲಾಗಿತ್ತು.

- Advertisement -

Latest News

error: Content is protected !!