Friday, June 5, 2026
Homeಕರಾವಳಿಕಡಬ: ಮೂರು ತಿಂಗಳ ಹಿಂದೆ ವಿವಾಹವಾಗಿದ್ದ ಉಪನ್ಯಾಸಕ ನೇಣಿಗೆ ಶರಣು

ಕಡಬ: ಮೂರು ತಿಂಗಳ ಹಿಂದೆ ವಿವಾಹವಾಗಿದ್ದ ಉಪನ್ಯಾಸಕ ನೇಣಿಗೆ ಶರಣು

- Advertisement -
- Advertisement -

ಕಡಬ: ಮೂರು ತಿಂಗಳ ಹಿಂದೆ ವಿವಾಹವಾಗಿದ್ದ ಉಪನ್ಯಾಸಕರೊಬ್ಬರು ನೇಣಿಗೆ ಶರಣಾದ ಘಟನೆ ಕಡಬ ತಾಲೂಕಿನ ಗೋಳಿತ್ತೊಟ್ಟು ಗ್ರಾಮದ ನೆಕ್ಕರೆ ಎಂಬಲ್ಲಿ ನಡೆದಿದೆ. ಆನಂದ ಗೌಡ(33ವ.) ಹೆಬ್ರಿ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.

ಹೆಬ್ರಿಯ ಕಾಲೇಜೊಂದರಲ್ಲಿ ಉಪನ್ಯಾಸಕರಾಗಿದ್ದ ಆನಂದ ಗೌಡರವರಿಗೆ ಮೂರು ತಿಂಗಳ ಹಿಂದೆಯಷ್ಟೇ ವಿವಾಹವಾಗಿತ್ತು. ಅಲ್ಲದೆ ಹೊಸ ಕಾರನ್ನು ಖರೀದಿಸಿದ್ದರು ಎನ್ನಲಾಗಿದೆ.

ಅವರು ವಾಸವಿದ್ದ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ವರದಿಯಾಗಿದೆ. ಮೃತ ಆನಂದ್ ಪತ್ನಿ, ತಂದೆ ಚಂದಪ್ಪ, ಅಕ್ಕ ವಿಜಯಾ ಹಾಗೂ ಅಣ್ಣ ಸತೀಶ್ ಅವರನ್ನು ಅಗಲಿದ್ದಾರೆ. ಆತ್ಮಹತ್ಯೆಯ ನಿಖರ ಕಾರಣ ಇನ್ನಷ್ಟೇ ತಿಳಿದು ಬರಬೇಕಿದೆ.

- Advertisement -

Latest News

error: Content is protected !!