Sunday, June 7, 2026
Homeತಾಜಾ ಸುದ್ದಿಸಂತೋಷ್ ಆತ್ಮಹತ್ಯೆ ಯತ್ನ ಪ್ರಕರಣಕ್ಕೆ ಹೊಸ ತಿರುವು: ಡಿಸ್ಚಾರ್ಜ್ ಆದ ಸಂತೋಷ್ ಹೇಳುವುದೇ ಬೇರೆ!..

ಸಂತೋಷ್ ಆತ್ಮಹತ್ಯೆ ಯತ್ನ ಪ್ರಕರಣಕ್ಕೆ ಹೊಸ ತಿರುವು: ಡಿಸ್ಚಾರ್ಜ್ ಆದ ಸಂತೋಷ್ ಹೇಳುವುದೇ ಬೇರೆ!..

- Advertisement -
- Advertisement -

ಬೆಂಗಳೂರು: ಎರಡು ದಿನಗಳ ಹಿಂದೆ ಆತ್ಮಹತ್ಯೆ ಯತ್ನ ನಡೆಸಿ ಆಸ್ಪತ್ರೆ ಸೇರಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಾರ್ಯದರ್ಶಿ ಎನ್. ಆರ್. ಸಂತೋಷ್ ಇಂದು ಡಿಸ್ಚಾರ್ಜ್ ಆಗಿದ್ದಾರೆ. ಅವರು ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ “ನಾನು ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿಯಲ್ಲ, ಕಳೆದ ಮೂರು ದಿನದ ಹಿಂದೆ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಊಟ ಮಾಡಿ ಅಲ್ಲಿನ ಊಟದಿಂದ ಅಜೀರ್ಣವಾಗಿತ್ತು. ಅದಕ್ಕಾಗಿ ಸೇವಿಸಿದ ಮಾತ್ರೆ ಅದಲು ಬದಲಾಗಿ ಹೀಗಾಯಿತು ಎಂದರು.

“ರಾಜಕೀಯ ಒತ್ತಡ ಸಹಜವಾಗಿ ಇದ್ದೆ ಇರುತ್ತದೆ ಅಷ್ಟಕ್ಕೇ ತಾನು ಮಾತ್ರೆ ತಗೋಳ್ಳೋ ಸ್ವಭಾವದವನಲ್ಲ. ನನಗೆ ನಿದ್ರೆ ಬರದೆ ಇದ್ದಾಗ ಮಾತ್ರೆ ತೆಗೆದುಕೊಳ್ಳುವ ಅಭ್ಯಾಸವಿತ್ತು. ಆದರೆ ಬೇರೆ ಮಾತ್ರೆ ತಗೊಂಡ ಪರಿಣಾಮ ಈ ರೀತಿಯಾಗಿದೆ” ಎಂದು ಅವರು ವಿವರಿಸಿದ್ದಾರೆ

- Advertisement -

Latest News

error: Content is protected !!