Friday, June 5, 2026
Homeತಾಜಾ ಸುದ್ದಿಅಮೇರಿಕನ್ ಲಾಟರಿಯಲ್ಲಿ 3.8 ಕೋಟಿ ರೂ ಗೆದ್ದ ನಿವೃತ್ತ ಸರ್ಕಾರಿ ನೌಕರ

ಅಮೇರಿಕನ್ ಲಾಟರಿಯಲ್ಲಿ 3.8 ಕೋಟಿ ರೂ ಗೆದ್ದ ನಿವೃತ್ತ ಸರ್ಕಾರಿ ನೌಕರ

- Advertisement -
- Advertisement -

ಬೆಂಗಳೂರು:  ಅದೃಷ್ಟ ಅನ್ನೋದು ಯಾವಾಗ ಯಾರಿಗೆ ಹೇಗೆ ಯಾವ ರೂಪದಲ್ಲಿ ಬರುತ್ತೆ ಅಂತಾ ಹೇಳೋದಕ್ಕೆ ಆಗಲ್ಲ. ಅದಕ್ಕೆ ಸ್ಪಷ್ಟ ನಿದರ್ಶನ ಇಲ್ಲಿದೆ ನೋಡಿ. ಬೆಂಗಳೂರಿನ ನಿವೃತ್ತ ಆರೋಗ್ಯ ಪರಿವೀಕ್ಷಕರೊಬ್ಬರಿಗೆ ಇಳಿ ವಯಸ್ಸಿನಲ್ಲಿ ಅದೃಷ್ಟಲಕ್ಷ್ಮೀ ಒಲಿದು ಬಂದಿದ್ದಾಳೆ.

ಹೌದು..  ಅಮೇರಿಕದ ಆನ್‍ಲೈನ್ ಲೊಟ್ಟೋ247 ಲಾಟರಿಯಲ್ಲಿ ಬೆಂಗಳೂರಿನ ನಿವೃತ್ತ ಆರೋಗ್ಯ ಪರಿವೀಕ್ಷಕ ಡಿ.ಲಿಂಗರಾಜು ಅವರಿಗೆ 514 ಸಾವಿರ ಅಮೇರಿಕನ್ ಡಾಲರ್ ಬಂಪರ್ ಬಹುಮಾನ ಬಂದಿದೆ.ತನಗೆ ಅಂದಾಜು 3.8 ಕೋಟಿ ಬಹುಮಾನ ಬಂದಿರುವುದನ್ನು ಮೊದಲು ನಂಬದ ಲಿಂಗರಾಜು ಅವರು ಫಲಿತಾಂಶ ಖಚಿತವಾಗುತ್ತಿದ್ದಂತೆ ನಿಟ್ಟುಸಿರುಬಿಟ್ಟಿದ್ದಾರೆ. ನಾನು ಲೊಟ್ಟೋ247 ಅನ್‍ಲೈನ್ ಲಾಟರಿ ಖರೀದಿಸಿದ್ದೆ, ಫಲಿತಾಂಶವನ್ನು ತಡವಾಗಿ ನೋಡಿದಾಗ ಆಶ್ಚರ್ಯ ಕಾದಿತ್ತು, ನನ್ನ ನಂಬರಿಗೆ ಬಹುಮಾನ ಘೋಷಣೆಯಾಗಿತ್ತು, ಆದರೂ ನಂಬದೆ ಮತ್ತೊಮ್ಮೆ ಪರಿಶೀಲಿಸಿದಾಗ 3.8ಕೋಟಿ ಹಣ ಗೆದ್ದಿರುವುದು ಖಾತ್ರಿಯಾಯಿತು ಎಂದು ಲಿಂಗರಾಜು ಪ್ರತಿಕ್ರಿಯಿಸಿದ್ದಾರೆ.

ನನಗೆ ಮೂವರು ಹೆಣ್ಣು ಮಕ್ಕಳಿದ್ದು, ಅವರೆಲ್ಲಾ ವಿವಾಹವಾಗಿ ಬ್ಯಾಂಕ್ ಲೋನ್ ಮೇಲೆ ಮನೆ ಕಟ್ಟಿಕೊಂಡಿದ್ದಾರೆ. ಮೊದಲು ಅವರ ಸಾಲ ತೀರಿಸಿ, ಕಷ್ಟದಲ್ಲಿರುವ ನನ್ನ ಸಂಬಂಧಿಕರಿಗೆ ಕೈಲಾದ ನೆರವು ನೀಡಿ ನಂತರ ನಾನು ನನ್ನ ಕನಸಿನ ಮನೆ ಖರೀದಿಸಲು ತೀರ್ಮಾನಿಸಿದ್ದೇನೆ ಎಂದಿದ್ದಾರೆ.

- Advertisement -

Latest News

error: Content is protected !!