Monday, June 29, 2026
Homeತಾಜಾ ಸುದ್ದಿಗ್ರಾಮ ಪಂಚಾಯ್ತಿ ಚುನಾವಣಾ ದಿನಾಂಕ ನಿಗದಿ-ಡಿಸೆಂಬರ್ 22, 27ಕ್ಕೆ ಚುನಾವಣೆ!..

ಗ್ರಾಮ ಪಂಚಾಯ್ತಿ ಚುನಾವಣಾ ದಿನಾಂಕ ನಿಗದಿ-ಡಿಸೆಂಬರ್ 22, 27ಕ್ಕೆ ಚುನಾವಣೆ!..

- Advertisement -
- Advertisement -

ಬೆಂಗಳೂರು : ಗ್ರಾಮ ಪಂಚಾಯ್ತಿ ಚುನಾವಣಾ ದಿನಾಂಕ ನಿಗದಿ ಕುರಿತು ಇಂದು ನಡೆದ ಪತ್ರಿಕಾಗೋಷ್ಠಿ ಸಂಪನ್ನ ಗೊಂಡಿದ್ದು ರಾಜ್ಯದ 5764 ಗ್ರಾಮ ಪಂಚಾಯ್ತಿಗಳಿಗೆ ಚುನಾವಣೆ ಘೋಷಣೆಯಾಗಿದೆ. ಕೊರೋನಾ ಸೋಂಕಿನ ಭೀತಿಯ ಹಿನ್ನಲೆಯಲ್ಲಿ ಒಂದು ಸಾವಿರ ಮತದಾರರಿಗೆ ಒಂದು ಮತಗಟ್ಟೆ ಸ್ಥಾಪಿಸಿ ಎರಡು ಹಂತಗಳಲ್ಲಿ ಚುನಾವಣೆ ನಡೆಸಲಾಗುತ್ತಿದೆ.

ಚುನಾವಣಾ ಆಯೋಗ ಈ ಕುರಿತು ಮಾಹಿತಿ ನೀಡಿದ್ದು ಡಿಸೆಂಬರ್ 22 2020ಕ್ಕೆ ಮೊದಲನೇ ಹಂತದಲ್ಲಿ ಚುನಾವಣೆ ಮತ್ತು ಎರಡನೇ ಹಂತದಲ್ಲಿ ಡಿಸೆಂಬರ್ 27, 2020ಕ್ಕೆ ನಡೆಯಲಿದೆ ಎಂಬುದಾಗಿ ತಿಳಿಸಿದೆ. ರಾಜ್ಯ ಚುನಾವಣಾ ಆಯೋಗ ಮುಖ್ಯಸ್ಥರು ಸುದ್ದಿ ಗೋಷ್ಠಿ ನಡೆಸಿ ಗ್ರಾಮ ಪಂಚಾಯ್ತಿಗಳಿಗೆ ಮತದಾನ ಪ್ರಕ್ರಿಯೆ ಕುರಿತು ಮಾಹಿತಿ ನೀಡಿದರು. ಎರಡು ಹಂತದ ಗ್ರಾಮ ಪಂಚಾಯ್ತಿ ಚುನಾವಣೆಯ ಮತ ಏಣಿಕೆ ದಿನಾಂಕ 30-12-2020ರಂದು ನಡೆಯಲಿದೆ

- Advertisement -

Latest News

error: Content is protected !!