Saturday, May 18, 2024
Homeತಾಜಾ ಸುದ್ದಿಬ್ರಹ್ಮಪುತ್ರ ನದಿಗೆ ಅಣೆಕಟ್ಟು ನಿರ್ಮಿಸಲಿರುವ ಚೀನಾ- ಕಳವಳದಲ್ಲಿ ಭಾರತ ಮತ್ತು ಬಾಂಗ್ಲಾದೇಶ!…

ಬ್ರಹ್ಮಪುತ್ರ ನದಿಗೆ ಅಣೆಕಟ್ಟು ನಿರ್ಮಿಸಲಿರುವ ಚೀನಾ- ಕಳವಳದಲ್ಲಿ ಭಾರತ ಮತ್ತು ಬಾಂಗ್ಲಾದೇಶ!…

spot_img
- Advertisement -
- Advertisement -

ಬೀಜಿಂಗ್:ಹಿಂದೆ ಚೀನಾ ಗಡಿಯಲ್ಲಿ ಭಾರತದೊಂದಿಗೆ ತಿಕ್ಕಾಟ ನಡೆಸಿದರೆ ಈಗ ಘರ್ಷಣೆಗೆ ಬೇರೆ ಮಾರ್ಗ ಹುಡುಕಿ ಕೊಂಡಿದೆ. ಇದರಂತೆ ಟಿಬೆಟ್‌ನಲ್ಲಿ ಬ್ರಹ್ಮಪುತ್ರ ನದಿಗೆ ಬೃಹತ್ ಜಲವಿದ್ಯುತ್ ಯೋಜನೆ ನಿರ್ಮಿಸಲು ಉದ್ದೇಶಿಸಿದೆ. ಈ ಕಾಮಗಾರಿ ಮುಂದಿನ ವರ್ಷ ಪೂರ್ಣವಾಗುವ ಮಾಹಿತಿ ಇದೆ. ಚೀನಾವು ಬ್ರಹ್ಮಪುತ್ರ ನದಿಗೆ ನಿರ್ಮಿಸುವ ಅಣೆಕಟ್ಟುಗಳು ಭಾರತ ಮತ್ತು ಬಾಂಗ್ಲಾದೇಶಕ್ಕೆ ಕಳವಳ ಮೂಡಿಸಿದೆ.ಭಾರತ ಮತ್ತು ಬಾಂಗ್ಲಾದೇಶದ ಅನೇಕ ನದಿ ತೀರದ ರಾಜ್ಯಗಳಿಗೆ ಇದು ಅಪಾಯವುಂಟುಮಾಡುವ ಸಾಧ್ಯತೆ ಇದೆ.

ಆದರೆ ಈ ಯೋಜನೆಯು ಜಲ ಸಂಪನ್ಮೂಲಗಳ ನಿರ್ವಹಣೆ ಮತ್ತು ಆಂತರಿಕ ಭದ್ರತೆಗೆ ನೆರವಾಗಲಿದೆ ಎಂಬುದು ಚೀನಾ ಉದ್ದೇಶ. ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ಟಿಬೆಟ್‌ನಲ್ಲಿ ಚೀನಾ ಬೃಹತ್ ಅಣೆಕಟ್ಟು ನಿರ್ಮಿಸಲಿದೆ.ಚೀನಾದ 14ನೇ ಪಂಚವಾರ್ಷಿಕ ಯೋಜನೆಯ ಭಾಗವಾಗಿ ಈ ಪ್ರಸ್ತಾಪವನ್ನು ಮುಂದಿರಿಸಲಾಗಿದ್ದು, ನದಿಯ ಕೆಳಹರಿವಿನ ಪ್ರದೇಶವನ್ನು ಜಲವಿದ್ಯುತ್ ಉತ್ಪಾದನೆಗೆ ಬಳಸಿಕೊಳ್ಳಲು ಚೀನಾ ತೀರ್ಮಾನಿಸಿದೆ.

- Advertisement -
spot_img

Latest News

error: Content is protected !!