Monday, April 29, 2024
Homeತಾಜಾ ಸುದ್ದಿಏಪ್ರಿಲ್ 1 ರಿಂದ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ‌ ಆರಂಭ; ಅರ್ಜಿ ಸಲ್ಲಿಸಲು ಬೇಕಾದ...

ಏಪ್ರಿಲ್ 1 ರಿಂದ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ‌ ಆರಂಭ; ಅರ್ಜಿ ಸಲ್ಲಿಸಲು ಬೇಕಾದ ವಿವರಗಳ ಮಾಹಿತಿ ಇಲ್ಲಿದೆ ನೋಡಿ

spot_img
- Advertisement -
- Advertisement -

ಬೆಂಗಳೂರು: ಸರ್ಕಾರ ಏಪ್ರಿಲ್ 1 ರಿಂದ ಮತ್ತೆ ಹೊಸ ಪಡಿತರ ಚೀಟಿಗೆ ಆನ್ ಲೈನ್ ಮೂಲಕ ಅರ್ಜಿ ಹಾಕಲು ಅವಕಾಶ ನೀಡಿದೆ ಎಂದು ಆಹಾರ, ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದ್ದಾರೆ.

ಈಗಾಗಲೇ ಹೊಸ ಪಡಿತರ ಚೀಟಿಗಾಗಿ ಬಂದಿರುವ 2,95,986 ಅರ್ಜಿಗಳನ್ನು ಮಾರ್ಚ್ 31 ರೊಳಗೆ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇದುವರೆಗೆ 57,651 ಮತ್ತು ತುರ್ತು ವೈದ್ಯಕೀಯ ಚಿಕಿತ್ಸೆಗಾಗಿ 744 ಕಾರ್ಡ್‌ಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದರು.

ಹೊಸ ಪಡಿತರ ಚೀಟಿ ಅರ್ಜಿ ಸಲ್ಲಿಸಲು ಮಾನದಂಡಗಳು;
1. ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು.
2. ಈಗಾಗಲೇ ಪಡಿತರ ಚೀಟಿಯನ್ನು ಹೊಂದಿರಬಾರದು.
3. ಹೊಸದಾಗಿ ಮದುವೆಯಾದ ದಂಪತಿಗಳು ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಬಬಹುದು.
4. ಕುಟುಂಬದ ಆದಾಯದ ಆಧಾರದ ಮೇಲೆ ಕುಟುಂಬಕ್ಕೆ ಯಾವ ಪಡಿತರ ಚೀಟಿಯನ್ನು ನೀಡಬೇಕು ಎನ್ನುವುದನ್ನು ನಿರ್ಧರಿಸಲಾಗುತ್ತದೆ.
5. ನೀವು https://ahara.kar.nic.in ನ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಕೆಗೆ ಬೇಕಾದ ದಾಖಲೆಗಳು: 
1. ಮತದಾರರ ಗುರುತಿನ ಚೀಟಿ
2. ಆಧಾರ್ ಕಾರ್ಡ್
3. ವಯಸ್ಸಿನ ಪ್ರಮಾಣಪತ್ರ
4. ಚಾಲನಾ ಪರವಾನಿಗೆ
5. ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ
6. ಮೊಬೈಲ್ ನಂಬರ್
7.ಸ್ವಯಂ ಘೋಷಿತ ಪ್ರಮಾಣಪತ್ರ

- Advertisement -
spot_img

Latest News

error: Content is protected !!