Friday, June 26, 2026
Homeತಾಜಾ ಸುದ್ದಿ‘ಮೋದಿ ಮೋದಿ’ ಎಂದು ಘೋಷಣೆ ಕೂಗಿದರೆ ಅವರ  ಕಪಾಳಕ್ಕೆ ಬಾರಿಸಿ; ಯುವಕರ ಕುರಿತು ಸಚಿವ‌‌‌ ಶಿವರಾಜ್...

‘ಮೋದಿ ಮೋದಿ’ ಎಂದು ಘೋಷಣೆ ಕೂಗಿದರೆ ಅವರ  ಕಪಾಳಕ್ಕೆ ಬಾರಿಸಿ; ಯುವಕರ ಕುರಿತು ಸಚಿವ‌‌‌ ಶಿವರಾಜ್ ತಂಗಡಗಿ ವಿವಾದಾತ್ಮಕ ಹೇಳಿಕೆ

- Advertisement -
- Advertisement -

ಕೊಪ್ಪಳ: ಮುಂದಿನ ದಿನಗಳಲ್ಲಿ ಯುವಕರು ‘ಮೋದಿ ಮೋದಿ’ ಎಂದು ಘೋಷಣೆ ಕೂಗಿದರೆ ಅವರ ಕಪಾಳಕ್ಕೆ ಬಾರಿಸಿ ಎಂದು ಸಚಿವ‌‌‌ ಶಿವರಾಜ್ ತಂಗಡಗಿ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. ಅವರು ಕೊಪ್ಪಳ ಜಿಲ್ಲೆಯ ಕಾರಟಗಿಯಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ್ ಹಿಟ್ನಾಳ ಪರ ಮತಯಾಚನೆಯ ಬಹಿರಂಗ ಸಭೆಯಲ್ಲಿ ಮೋದಿ ಕುರಿತು ಮಾತನಾಡಿದರು.

‘ಪ್ರಧಾನಿ ಮೋದಿಯವರು ಕೇವಲ ಸುಳ್ಳು ಹೇಳುತ್ತಿದ್ದಾರೆ. ಪ್ರಧಾನಿ ಮೋದಿ ಇದುವರೆಗೂ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಯುವ ಜನರು ಉದ್ಯೋಗ ಕೇಳಿದ್ರೆ ಪಕೋಡಾ ಮಾರೋಕೆ ಹೋಗಿ ಅಂತ ಹೇಳ್ತಾರೆ. ಈಗ ಮತ್ತೆ ಚುನಾವಣೆ ಬಂತು ಅಂತ ಬರ್ತಾರೆ. ಯುವಕರು ಮೋದಿ ಮೋದಿ ಅಂದ್ರೆ ಅವರ ಕಪಾಳಕ್ಕೆ ಬಡಿಯಬೇಕು,’ ಎಂದ ಸಚಿವ ಶಿವರಾಜ ತಂಗಡಗಿ ಹೇಳಿದ್ದು ವಿವಾದಕ್ಕೆ ಕಾರಣವಾಗಿದೆ.

- Advertisement -

Latest News

error: Content is protected !!