Friday, May 17, 2024
Homeಕರಾವಳಿಕಡಬ ತಾಲೂಕಿಗೂ ವಕ್ಕರಿಸಿದ ಕಿಲ್ಲರ್ ಕೊರೋನಾ: ಶಾಲಾ ಶಿಕ್ಷಕರೊಬ್ಬರಿಗೆ ಕೊರೋನಾ ಪಾಸಿಟಿವ್

ಕಡಬ ತಾಲೂಕಿಗೂ ವಕ್ಕರಿಸಿದ ಕಿಲ್ಲರ್ ಕೊರೋನಾ: ಶಾಲಾ ಶಿಕ್ಷಕರೊಬ್ಬರಿಗೆ ಕೊರೋನಾ ಪಾಸಿಟಿವ್

spot_img
- Advertisement -
- Advertisement -

ಕಡಬ: ಇಂದು ಸಂಜೆ ಬಿಡುಗಡೆಯಾಗಿರುವ ಕೊರೋನಾ ಹೆಲ್ತ್ ಬುಲೆಟಿನ್ ನ ಸಂಖ್ಯೆ ರಾಜ್ಯದ ಜನತೆಯನ್ನು ಬೆಚ್ಚಿ ಬೀಳಿಸುವುದರೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿಗೂ ಕೊರೋನಾ ಶಾಕ್ ನೀಡಿದೆ.

ಇಂದು ಉಡುಪಿಯಲ್ಲಿ 205 ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 8 ಮಂದಿಗೆ ಮಹಾಮಾರಿ ಕೊರೋನಾ ವಕ್ಕರಿಸಿದೆ. ಈ 8 ಮಂದಿಯಲ್ಲಿ ಒಂದು ಪ್ರಕರಣ ಕಡಬದಲ್ಲಿ ಪತ್ತೆಯಾಗಿದೆ.

ಕಡಬ ಪರಿಸರದ ಶಾಲೆಯೊಂದರ ಶಿಕ್ಷಕ, ಅರಿಗದೋಲದ ನಿವಾಸಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಇದರಿಂದ ಇಷ್ಟು ದಿನ ಶಾಂತವಾಗಿದ್ದ ಕಡಬದ ಜನ ಇದೀಗ ದಿಗ್ಬ್ರಾಂತರಾಗಿದ್ದಾರೆ.

ಈ ಹಿನ್ನಲೆಯಲ್ಲಿ ಆರಿಗ ದೊಳದ ಏಳು ಮನೆಗಳು ಸೀಲ್ ಡೌನ್ ಮಾಡಲಾಗಿದೆ.

- Advertisement -
spot_img

Latest News

error: Content is protected !!