Thursday, June 4, 2026
Homeಕರಾವಳಿಉಡುಪಿಉಡುಪಿಗೆ ಅಪ್ಪಳಿಸಿದ ಕೊರೋನಾ ಸುನಾಮಿ: ಜಿಲ್ಲೆಯ 204 ಮಂದಿಗೆ ಸೋಂಕು ದೃಢ !

ಉಡುಪಿಗೆ ಅಪ್ಪಳಿಸಿದ ಕೊರೋನಾ ಸುನಾಮಿ: ಜಿಲ್ಲೆಯ 204 ಮಂದಿಗೆ ಸೋಂಕು ದೃಢ !

- Advertisement -
- Advertisement -

ಬೆಂಗಳೂರು: ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಒಂದೇ ದಿನ ಒಟ್ಟು 515 ಕೋವಿಡ್‌ 19 ಪ್ರಕರಣಗಳು ದೃಢಪಟ್ಟಿವೆ. ಇದರಲ್ಲಿ ಉಡುಪಿ ಒಂದೇ ಜಿಲ್ಲೆಯಲ್ಲಿ 205 ಪ್ರಕರಣಗಳು ಕಂಡು ಬಂದಿವೆ. ಈ ಮೂಲಕ ಉಡುಪಿ ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆ 768ಕ್ಕೆ ಏರಿಕೆಯಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು 8 ಮಂದಿಗೆ ಸೋಂಕು ತಗುಲಿರುವುದು ದೃಢವಾಗಿದೆ. ಇಂದು ಉಡುಪಿಯಲ್ಲಿ ಪತ್ತೆಯಾದ ಎಲ್ಲಾ ಪಾಸಿಟಿವ್ ಪ್ರಕರಣಗಳಿಗೆ ಮಹಾರಾಷ್ಟ್ರವೇ ಮೂಲವೆಂದು ಎಂದು ವರದಿಯಲ್ಲಿ ತಿಳಿಸಲಾಗಿದೆ.

ಇನ್ನು ಯಾದಗರಿಯಲ್ಲಿಯೂ ಕೊರೊನಾ ಸೋಂಕು ವ್ಯಾಪಿಸುತ್ತಿದೆ. ಇಂದು ಜಿಲ್ಲೆಯಲ್ಲಿ ಒಟ್ಟು 74 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಉಳಿದಂತೆ ವಿಜಯಪುರ 53, ಕಲಬುರಗಿ 42, ಬೀದರ್ 39, ಬೆಳಗಾವಿ 36, ಮಂಡ್ಯ 13, ಬೆಂಗಳೂರು ಗ್ರಾಮಾಂತರ 12, ಬೆಂಗಳೂರು ನಗರ 10, ದಕ್ಷಿಣ ಕನ್ನಡ 8, ಉತ್ತರ ಕನ್ನಡ 7, ಚಿಕ್ಕಬಳ್ಳಾಪುರ 3, ಹಾಸನ 3, ಧಾರವಾಡ 3, ಹಾವೇರಿ 2, ರಾಮನಗರ 2, ಬಾಗಲಕೋಟೆ, ಬಳ್ಳಾರಿ, ದಾವಣಗೆರೆ ಹಾಗೂ ಕೋಲಾರ ಜಿಲ್ಲೆಗಳಲ್ಲಿ ತಲಾ ಒಂದೊಂದು ಕೊರೊನಾ ಪ್ರಕರಣ ದಾಖಲಾಗಿದೆ. ಈ ಮೂಲಕ ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ 4935ಕ್ಕೆ ಏರಿಕೆಯಾಗಿದೆ.

- Advertisement -

Latest News

error: Content is protected !!