Thursday, July 16, 2026
Homeತಾಜಾ ಸುದ್ದಿನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ: ಲಾತೂರ್‌ನ ಪ್ರಮುಖ ಕೋಚಿಂಗ್ ಸೆಂಟರ್ ಸಂಸ್ಥಾಪಕ ಸಿಬಿಐ ವಶಕ್ಕೆ

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ: ಲಾತೂರ್‌ನ ಪ್ರಮುಖ ಕೋಚಿಂಗ್ ಸೆಂಟರ್ ಸಂಸ್ಥಾಪಕ ಸಿಬಿಐ ವಶಕ್ಕೆ

- Advertisement -
- Advertisement -

ನೀಟ್ ಯುಜಿ (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಲಾತೂರ್‌ನ ಪ್ರಮುಖ ರೇಣುಕೈ ರಸಾಯನಶಾಸ್ತ್ರ ತರಬೇತಿ ಕೇಂದ್ರದ ಸಂಸ್ಥಾಪಕ ಶಿವರಾಜ್ ರಘುನಾಥ್ ಮೋಟೆಗಾಂವ್ಕರ್‌ನನ್ನು ಸಿಬಿಐ ಭಾನುವಾರ ಬಂಧಿಸಿದೆ.

ಪರೀಕ್ಷೆಗೆ ಮುನ್ನವೇ ಪ್ರಶ್ನೆ ಪತ್ರಿಕೆ ಹಾಗೂ ಉತ್ತರಗಳನ್ನು ಪಡೆದು ಹಂಚಿಕೆ ಮಾಡಿದ ಸಂಘಟಿತ ಗ್ಯಾಂಗ್‌ನ ಸಕ್ರಿಯ ಸದಸ್ಯ ಈತನಾಗಿದ್ದು, ತನಿಖೆ ವೇಳೆ ಈತನ ಮೊಬೈಲ್‌ನಲ್ಲಿ ಸೋರಿಕೆಯಾದ ಪತ್ರಿಕೆ ಪತ್ತೆಯಾಗಿದೆ.

ಇನ್ನು ಒಂಭತ್ತು ಶಾಖೆಗಳನ್ನು ಹೊಂದಿರುವ ಈ ಸಂಸ್ಥೆಯ ಮಾಲೀಕನಿಗಿಂತ ಮುನ್ನ, ಸಿಬಿಐ ಈಗಾಗಲೇ ಉಪನ್ಯಾಸಕರುಗಳಾದ ಪಿ.ವಿ. ಕುಲಕರ್ಣಿ, ಮನೀಶಾ ಮಾಂಧರೆ ಮತ್ತು ಮಧ್ಯವರ್ತಿ ಮನೀಶಾ ವಾಘ್ಮಾರೆ ಸೇರಿದಂತೆ ದೆಹಲಿ, ಜೈಪುರ, ನಾಸಿಕ್ ಮುಂತಾದೆಡೆಗಳಿಂದ ಒಟ್ಟು 10 ಆರೋಪಿಗಳನ್ನು ಬಂಧಿಸಿದ್ದು, ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದೆ.

- Advertisement -

Latest News

error: Content is protected !!