Tuesday, July 14, 2026
Homeಅಪರಾಧನೀಟ್ ಅಕ್ರಮ ತನಿಖೆ ಚುರುಕು: ಸಿಬಿಐ ವಶಕ್ಕೆ ಐದು ಆರೋಪಿಗಳು

ನೀಟ್ ಅಕ್ರಮ ತನಿಖೆ ಚುರುಕು: ಸಿಬಿಐ ವಶಕ್ಕೆ ಐದು ಆರೋಪಿಗಳು

- Advertisement -
- Advertisement -

ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ತೀವ್ರಗೊಳಿಸಿದ್ದು, ಪುಣೆ ಮೂಲದ ಧನಂಜಯ ಲೋಖಂಡ ಮತ್ತು ಮನಿಷಾ ವಾಗ್ಮೋರೆ ಎಂಬುವವರನ್ನು ಬಂಧಿಸಿದೆ.

ಪರೀಕ್ಷೆಗಿಂತ ನಾಲ್ಕು ದಿನ ಮುಂಚಿತವಾಗಿಯೇ ಟೆಲಿಗ್ರಾಂ ಮೂಲಕ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದು, ಇದರಲ್ಲಿ ಎನ್‌ಟಿಎ (NTA) ಅಧಿಕಾರಿಗಳ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ.

ಈ ಅಕ್ರಮದ ಹಿನ್ನೆಲೆಯಲ್ಲಿ 22.7 ಲಕ್ಷ ವಿದ್ಯಾರ್ಥಿಗಳು ಬರೆದಿದ್ದ ಪರೀಕ್ಷೆಯನ್ನು ರದ್ದುಗೊಳಿಸಲಾಗಿದ್ದು, ಸದ್ಯ ಐವರು ಆರೋಪಿಗಳು ಸಿಬಿಐ ವಶದಲ್ಲಿದ್ದಾರೆ. ಸಿಬಿಐ ಅಧಿಕಾರಿಗಳು ವಿವಿಧೆಡೆ ದಾಳಿ ನಡೆಸಿ ಡಿಜಿಟಲ್ ಪುರಾವೆಗಳನ್ನು ಸಂಗ್ರಹಿಸುತ್ತಿದ್ದಾರೆ.

- Advertisement -

Latest News

error: Content is protected !!