- Advertisement -
![]()
- Advertisement -
ಕಾಸರಗೋಡು: ನೀಲೇಶ್ವರಂನ ವೀರ ನಾರ್ಕವ್ ದೇವಸ್ಥಾನದಲ್ಲಿ ನಡೆದ ಪಟಾಕಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ದೇವಸ್ಥಾನದ ಅಧ್ಯಕ್ಷ ಮತ್ತು ಕಾರ್ಯದರ್ಶಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅನುಮತಿ ಪಡೆಯದೇ ಪಟಾಕಿ ಸಿಡಿಸಿರುವ ಆರೋಪದಡಿ ಪ್ರಕರಣದ ದಾಖಲಿಸಿಕೊಂಡಿರುವ ನೀಲೇಶ್ವರಂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಸ್ಫೋಟ ಸಂಭವಿಸಿದ ಸ್ಥಳಕ್ಕೆ ವಿಧಿ ವಿಜ್ಞಾನ ಪ್ರಯೋಗಯದ ತಂಡ ಕೂಡಾ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಈ ಮಧ್ಯೆ, ದುರಂತದಲ್ಲಿ ಗಾಯಗೊಂಡಿರುವ ಇಪ್ಪತ್ತೊಂದು ಗಾಯಾಳುಗಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ.ಸ್ಫೋಟದ ತೀವ್ರತೆಗೆ ಪಟಾಕಿ ಸಂಗ್ರಹಿಸಿಟ್ಟಿದ್ದ ಗೋದಾಮಿನ ಗೋಡೆಗಳು ಛಿದ್ರಗೊಂಡಿವೆ ಎಂದು ಹೇಳಲಾಗಿದೆ.
ವೀರ ನಾರ್ಕವ್ ದೇವಸ್ಥಾನದಲ್ಲಿ ತೆಯ್ಯಂಕಟ್ಟು ಮಹೋತ್ಸವ ನಡೆಯುತ್ತಿದ್ದು, ನಿನ್ನೆ ಮಧ್ಯರಾತ್ರಿ 12 ಗಂಟೆ ವೇಳೆಗೆ ಕುಲಿಚು ತೊಟ್ಟಂ ಆಚರಣೆ ನಡೆಯುತ್ತಿದ್ದ ವೇಳೆ ಘಟನೆ ಪಟಾಕಿ ಸ್ಫೋಟ ಸಂಭವಿಸಿದೆ.
- Advertisement -


