Sunday, June 7, 2026
Homeಚಿಕ್ಕಮಗಳೂರುಚಿಕ್ಕಮಗಳೂರಿನಲ್ಲಿ ನ್ಯಾಷನಲ್ ಲೆವೆಲ್ ಕಬ್ಬಡಿ ಆಟಗಾರ ಆತ್ಮಹತ್ಯೆ

ಚಿಕ್ಕಮಗಳೂರಿನಲ್ಲಿ ನ್ಯಾಷನಲ್ ಲೆವೆಲ್ ಕಬ್ಬಡಿ ಆಟಗಾರ ಆತ್ಮಹತ್ಯೆ

- Advertisement -
- Advertisement -

ಚಿಕ್ಕಮಗಳೂರು; ನ್ಯಾಷನಲ್ ಲೆವೆಲ್ ಕಬ್ಬಡಿ ಆಟಗಾರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ತೇಗೂರು ಗ್ರಾಮದಲ್ಲಿ ನಡೆದಿದೆ.ವಿನೋದ್ ರಾಜ್ ಅರಸ್ ಆತ್ಮಹತ್ಯೆಗೆ ಶರಣಾದವರು

ಪ್ರೀತಿಸಿ ಮದುವೆಯಾದ ಪತ್ನಿ ಬಿಟ್ಟು ಹೋದ ಹಿನ್ನೆಲೆ ವಿನೋದ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.ಶುಕ್ರವಾರ ವಿನೋದ್ ರಾಜ್ ಅರಸ್ ಆತ್ಮಹತ್ಯೆಗೆ ಯತ್ನಿಸಿದ್ದರು. ಬಳಿಕ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ನಿನ್ನೆ ರಾತ್ರಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.

2023 ಡಿ.10 ರಂದು ವಿನೋದ್ ಮದುವೆಯಾಗಿದ್ದರು.ಡಿ.31ಕ್ಕೆ ಪತಿ ಬೇಡ ಎಂದು ಪತ್ನಿ ಬಿಟ್ಟು ಹೋಗಿದ್ದರು. ಎರಡು ವರ್ಷ ಪ್ರೀತಿಸಿ ಮದುವೆಯಾಗಿದ್ದ ಪತ್ನಿ ವಿನೋದ್ ರನ್ನು ಬಿಟ್ಟು ಹೋಗಿದ್ದರು.ಡಿ.31 ನಂತರ ಈ ಪ್ರೇಮ ವಿವಾಹ ಪ್ರಕರಣ ಮಹಿಳಾ ಪೊಲೀಸ್ ಠಾಣಾ ಮೆಟ್ಟಿಲೇರಿತ್ತು. ಇದೀಗ ವಿನೋದ್ ಆತ್ಮಹತ್ಯೆಗೆ ಶರಣಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!