Monday, June 8, 2026
Homeತಾಜಾ ಸುದ್ದಿಚಿಕ್ಕಮಗಳೂರಿನ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಅಧ್ಯಕ್ಷರಾಗಿ ನರೇಂದ್ರ ರೈ ದೇರ್ಲ‌ ನೇಮಕ: ರಾಜ್ಯ ಸರ್ಕಾರದಿಂದ ನೇಮಕಾತಿ...

ಚಿಕ್ಕಮಗಳೂರಿನ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಅಧ್ಯಕ್ಷರಾಗಿ ನರೇಂದ್ರ ರೈ ದೇರ್ಲ‌ ನೇಮಕ: ರಾಜ್ಯ ಸರ್ಕಾರದಿಂದ ನೇಮಕಾತಿ ಆದೇಶ

- Advertisement -
- Advertisement -

ಬೆಂಗಳೂರು: ಚಿಕ್ಕಮಗಳೂರಿನ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಅಧ್ಯಕ್ಷರಾಗಿ ನರೇಂದ್ರ ರೈ ದೇರ್ಲ ಅವರನ್ನು ನೇಮಿಸಲಾಗಿದೆ.

ತೇಜಸ್ವಿ ಪ್ರತಿಷ್ಠಾನದ ಸದಸ್ಯರಾಗಿ ಸುಳ್ಯದ ಲಕ್ಷ್ಮೀನಾರಾಯಣ ಕಜೆಗದ್ದೆ ನೇಮಕಗೊಂಡಿದ್ದಾರೆ.

ಇದಲ್ಲದೇ ಮಂಡ್ಯದ ಕೆ.ಎಸ್. ನರಸಿಂಹಸ್ವಾಮಿ ಟ್ರಸ್ಟ್ ಸದಸ್ಯರಾಗಿ ಡಾ. ಪ್ರದೀಪ್ ಕುಮಾರ್ ಹೆಬ್ರಿ ನೇಮಕ ಮಾಡಲಾಗಿದೆ.

ಹಾವೇರಿಯ ಡಾ. ವಿ.ಕೃ. ಗೋಕಾಕ್ ಪ್ರತಿಷ್ಠಾನದ ಸದಸ್ಯರಾಗಿ ಮಂಗಳೂರಿನ ಎನ್.ಎ.‌ ದಾಮೋದರ ಶೆಟ್ಟಿ ನೇಮಿಸಲ್ಪಟ್ಟಿದ್ದಾರೆ.

ಧಾರವಾಡದ ಮಲ್ಲಿಕಾರ್ಜುನ ‌ಮನ್ಸೂರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಸದಸ್ಯರಾಗಿ ಮಂಗಳೂರಿನ ಉಸ್ತಾದ್ ರಫೀಕ್ ಖಾನ್ ಅವರನ್ನು ನೇಮಕಾತಿ ಮಾಡಲಾಗಿದೆ.

ಇಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯ 21 ಟ್ರಸ್ಟ್ ಗಳು ಮತ್ತು ಪ್ರತಿಷ್ಠಾನಗಳಿಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

- Advertisement -

Latest News

error: Content is protected !!