- Advertisement -
- Advertisement -
ಬೆಂಗಳೂರು: ನಂದಿನಿ ಮಿಲ್ಕ್ ಪೌಡರ್ನಲ್ಲಿ ಕಲಬೆರಕೆ ನಡೆಯುತ್ತಿದೆ ಎಂಬ ಆರೋಪಗಳಿಗೆ ಆಹಾರ ಸುರಕ್ಷತಾ ಇಲಾಖೆಯ ವರದಿ ತೆರೆ ಎಳೆದಿದೆ. ಪರೀಕ್ಷೆಗೆ ಒಳಪಡಿಸಿದ ಮಿಲ್ಕ್ ಪೌಡರ್ ಮಾದರಿಗಳು ಸಂಪೂರ್ಣ ಸುರಕ್ಷಿತವಾಗಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಈ ಹಿಂದೆ ಕಲಬೆರಕೆ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಆರೋಗ್ಯ ಸಚಿವರು ಗುಣಮಟ್ಟ ಪರೀಕ್ಷೆಗೆ ಸೂಚನೆ ನೀಡಿದ್ದರು. ಅದರಂತೆ ಸೆಪ್ಟೆಂಬರ್ 26ರಂದು ಕೆಎಂಎಫ್ ಡೈರಿಗಳಿಂದ ಮಾದರಿಗಳನ್ನು ಸಂಗ್ರಹಿಸಿ ಎಫ್ಎಸ್ಎಸ್ಎಐ ಪರೀಕ್ಷೆಗೆ ಕಳುಹಿಸಲಾಗಿತ್ತು. ಇದೀಗ ಲ್ಯಾಬ್ ವರದಿ ಬಂದಿದ್ದು, ನಂದಿನಿ ಮಿಲ್ಕ್ ಪೌಡರ್ ಸುರಕ್ಷಿತವಾಗಿದೆ ಎಂಬುದು ದೃಢಪಟ್ಟಿದೆ.
- Advertisement -


