Wednesday, June 3, 2026
Homeತಾಜಾ ಸುದ್ದಿರಾಜ್ಯದ ಜನ ಕರೆಂಟ್ ಬಿಲ್ ಕಟ್ಟಬೇಡಿ!:ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿಕೆ

ರಾಜ್ಯದ ಜನ ಕರೆಂಟ್ ಬಿಲ್ ಕಟ್ಟಬೇಡಿ!:ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿಕೆ

- Advertisement -
- Advertisement -

ಬೆಂಗಳೂರು: ರಾಜ್ಯದ ಜನ ವಿದ್ಯುತ್ ಬಿಲ್ ಕಟ್ಟಬಾರದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಇಂದು ಬಿಜೆಪಿ ರಾಜ್ಯ ಕಚೇರಿಯಲ್ಲಿ ಮಾತನಾಡಿದ ನಳೀನ್ ಕುಮಾರ್ ಕಟೀಲ್, ಸಿದ್ದರಾಮಯ್ಯನವರು ಭಾಷಣದಲ್ಲಿ ತಮಗೂ ಕೂಡಾ ಕರೆಂಟ್ ಬಿಲ್ ಇರುವುದಿಲ್ಲ ಎಂದು ಹೇಳಿದ್ದಾರೆ, ಹಾಗಾಗಿ ಭಾಗ್ಯದ ಭಾಗವಾಗಿ ಜನರು ಯಾರೂ ಕೂಡಾ ಕರೆಂಟ್ ಬಿಲ್ ಕಟ್ಟಬಾರದು ಎಂದು ನಾನು ವಿನಂತಿ ಮಾಡುತ್ತೇನೆ ಎಂದು ಹೇಳಿದ್ದಾರೆ. ‌

ರಾಜ್ಯದ ವಿವಿಧ ಕಡೆಗಳಲ್ಲಿ ಜನರು ಕರೆಂಟ್ ಬಿಲ್ ಕಟ್ಟುವುದಿಲ್ಲ ಎಂದು ನಿರಾಕರಿಸಿರುವುದು ಸಹಜವಾಗಿದೆ, ಕಾಂಗ್ರೆಸ್ ಘೋಷಣೆ ಮಾಡಿರುವ ಭಾಗ್ಯದ ಲೆಕ್ಕದಲ್ಲಿ ಕಟ್ಟಬೇಕಿಲ್ಲ ಎಂದು ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ.

- Advertisement -

Latest News

error: Content is protected !!