- Advertisement -
![]()
- Advertisement -
ಭುವನೇಶ್ವರ: ಮಾಜಿ ಸಂಸದ ನಳೀನ್ ಕುಮಾರ್ ಕಟೀಲ್ ಒಡಿಶಾ ರಾಜ್ಯದ ನೌಪಾಡಾ ಜಿಲ್ಲೆಯಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.
ನೌಪಾಡಾ ಜಿಲ್ಲೆಯ ಖಾರಿಆರ್ ವಿಧಾನಸಭಾ ಕ್ಷೇತ್ರದ ಬಿನೋಪುರ್ ಮತ್ತು ಖುಡಪೆಜ್ ವ್ಯಾಪ್ತಿಯಲ್ಲಿ ಕಾರ್ನರ್ ಮೀಟಿಂಗ್ ಗಳ ಮೂಲಕ ಬಿಜೆಪಿ ಸದಸ್ಯತ್ವ ಅಭಿಯಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ನಳೀನ್ ಕುಮಾರ್ ಕಟೀಲ್ ಭಾಗಿಯಾಗಿದ್ದರು.
ಇದೇ ವೇಳೆ, ಒಡಿಶಾ ರಾಜ್ಯದ ಬಿಜೆಪಿ ಮಾಜಿ ಅಧ್ಯಕ್ಷ ಹಾಗೂ ಮಾಜಿ ಸಂಸದ ಬಸಂತ ಕುಮಾರ್ ಪಾಂಡ ಅವರನ್ನು ನಳೀನ್ ಕುಮಾರ್ ಕಟೀಲ್ ಸೌಹಾರ್ದಯುತವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದರು.
ಬಿಜೆಪಿ ನೌಪಾಡಾ ಜಿಲ್ಲಾಧ್ಯಕ್ಷ ಸುಬ್ರತ್ ಕುಮಾರ್ ಠಾಕೂರ್ ಸೇರಿದಂತೆ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.
- Advertisement -


