Wednesday, June 24, 2026
Homeಕರಾವಳಿಮಂಗಳೂರುಮಂಗಳೂರು: ಎಂಎಸ್ಇಝೆಡ್ ನಲ್ಲಿ ಜೆಬಿಎಫ್ ಕಂಪನಿಗೆ ಜಮೀನು ಬಿಟ್ಟು ಕೊಟ್ಟವರಿಗೆ ಉದ್ಯೋಗ ನೀಡಲು ಗೈಲ್ ಇಂಡಿಯಾ...

ಮಂಗಳೂರು: ಎಂಎಸ್ಇಝೆಡ್ ನಲ್ಲಿ ಜೆಬಿಎಫ್ ಕಂಪನಿಗೆ ಜಮೀನು ಬಿಟ್ಟು ಕೊಟ್ಟವರಿಗೆ ಉದ್ಯೋಗ ನೀಡಲು ಗೈಲ್ ಇಂಡಿಯಾ ಸಮ್ಮತಿ

- Advertisement -
- Advertisement -

ಮಂಗಳೂರು: ಮಂಗಳೂರಿನ ವಿಶೇಷ ಆರ್ಥಿಕ ವಲಯದಲ್ಲಿ ಜೆಬಿಎಫ್‌ ಕಂಪೆನಿ ಸ್ಥಾಪನೆಗೆ ಜಮೀನು ಬಿಟ್ಟುಕೊಟ್ಟ ಕುಟುಂಬಸ್ಥರಿಗೆ ಉದ್ಯೋಗ ನೀಡಲು ಗೈಲ್‌ ಇಂಡಿಯಾ ಕಂಪೆನಿ ಸಮ್ಮತಿಸಿದೆ.

ಉದ್ಯೋಗ ನೀಡುವ ಮೂಲಕ ಗಂಭೀರ ಸಮಸ್ಯೆ ಬಗೆಹರಿಸುತ್ತಿರುವುದಾಗಿ ಜಿಎಂಪಿಎಲ್‌ ಕಂಪೆನಿ ಅಧ್ಯಕ್ಷರು ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರಿಗೆ ಪತ್ರದ ಮೂಲಕ ಮಾಹಿತಿ ನೀಡಿದ್ದಾರೆ.

ಜಮೀನು ನೀಡಿದವರಿಗೆ ಉದ್ಯೋಗ ನೀಡುವ ಸಂಬಂಧ ಜಿಎಂಪಿಎಲ್‌ ನ ಸಿಎಂಡಿ ಆಯುಷ್‌ ಗುಪ್ತಾ ಅವರೊಂದಿಗೆ ಕೇಂದ್ರ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಇಲಾಖೆ ಸಚಿವ ಹರ್‌ದೀಪ್‌ ಸಿಂಗ್‌ ಪುರಿ
ಕಳೆದ ತಿಂಗಳು ಸಭೆ ನಡೆಸಿದ್ದರು.

ಸ್ಥಳೀಯರಿಗೆ ಉದ್ಯೋಗ ನೀಡುವ ಸಂಬಂಧ ಕೇಂದ್ರ ಸಚಿವ ಹರದೀಪ್ ಸಿಂಗ್ ಪುರಿ ಅವರಿಗೆ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮತ್ತು ಮಾಜಿ ಸಂಸದ ನಳೀನ್ ಕುಮಾರ್ ಕಟೀಲ್ ಮನವಿ ಸಲ್ಲಿಸಿದ್ದರು.

- Advertisement -

Latest News

error: Content is protected !!