Friday, June 5, 2026
Homeತಾಜಾ ಸುದ್ದಿಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಭೇಟಿ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್

ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಭೇಟಿ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್

- Advertisement -
- Advertisement -

ವಿಜಯಪುರ: ವಿಜಯಪುರ ನಗರದಲ್ಲಿರುವ ಜ್ಞಾನ ಯೋಗಾಶ್ರಮಕ್ಕೆ ಇಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಭೇಟಿ ನೀಡಿದ್ದರು. ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಭೇಟಿ ಮಾಡಿದ ಕಟೀಲ್, ಕೆಲವು ಹೊತ್ತು ಮಾತುಕತೆ ನಡೆಸಿದರು.

ನಳೀನ್ ಕುಮಾರ್ ಕಟೀಲ್ ಗೆ ಸಿದ್ಧೇಶ್ವರ ಸ್ವಾಮೀಜಿ ಫಲ ಪುಷ್ಟ ನೀಡಿ ಶಾಲು ಹೊದಿಸಿ ಸನ್ಮಾನಿಸಿದರು. ನಾನು ಆಧ್ಯಾತ್ಮಿಕದಿಂದ ರಾಜಕೀಯಕ್ಕೆ ಬಂದವನಾಗಿದ್ದು, ಸ್ವಾಮೀಜಿ ಭೇಟಿಯಾಗಿದ್ದು ಸಂತಸ ತಂದಿದೆ. ಕೆಲವು ಸಲಹೆ ಸೂಚನೆಗಳನ್ನು ಸ್ವಾಮೀಜಿಗಳು ನೀಡಿದ್ದಾರೆಂದು‌ ಸಿದ್ದೇಶ್ವರ ಸ್ವಾಮೀಜಿ ಭೇಟಿ ಬಳಿಕ ಕಟೀಲ್ ಹೇಳಿದ್ದಾರೆ.

ಇದೇ ವೇಳೆ ದಸರಾ ಹಬ್ಬದ ಬಳಿಕ ಬಿಜೆಪಿಯ ಮೂರು ತಂಡಗಳಿಂದ ರಾಜ್ಯ ಪ್ರವಾಸ ಆರಂಭವಾಗಲಿದೆ ಎಂದು ನಳೀನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.

- Advertisement -

Latest News

error: Content is protected !!