Wednesday, June 3, 2026
Homeತಾಜಾ ಸುದ್ದಿವಿಪಕ್ಷಗಳ ವಿರುದ್ಧ ಸರಣಿ ಟ್ವೀಟ್‌, ಕಿಡಿಕಾರಿದ ಸಂಸದ ನಳಿನ್‌ ಕುಮಾರ್‌ ಕಟೀಲ್‌!..

ವಿಪಕ್ಷಗಳ ವಿರುದ್ಧ ಸರಣಿ ಟ್ವೀಟ್‌, ಕಿಡಿಕಾರಿದ ಸಂಸದ ನಳಿನ್‌ ಕುಮಾರ್‌ ಕಟೀಲ್‌!..

- Advertisement -
- Advertisement -

ಮಂಗಳೂರು: ವಿಪಕ್ಷಗಳು ತಮ್ಮ ಉದ್ದೇಶದ ಈಡೇರಿಕೆಗೆ ರೈತರಿಗೆ ಮೋಸವೆಸಗುತ್ತಿದ್ದು ಮಧ್ಯವರ್ತಿಗಳು, ಖರೀದಿದಾರರ ಪರವಾಗಿರುವ ಸರಕಾರದ ರೈತಪರ ಕಾಯ್ದೆಯನ್ನು ವಿರೋಧಿಸುತ್ತವೆ ಎಂದು ಬಿಜೆಪಿ ರಾಜ್ಯಧ್ಯಕ್ಷ, ಸಂಸದ ನಳಿನ್‌ ಕುಮಾರ್‌ ಕಟೀಲ್‌ ಅವರು ಸರಣಿ ಟ್ವೀಟ್‌ ಮೂಲಕ ಹೇಳಿದ್ದಾರೆ.


”ಸ್ವತಂತ್ರ ಭಾರತದಲ್ಲಿ ಮೊದಲಬಾರಿಗೆ ರೈತರಿಗೆ ತಮ್ಮ ಉತ್ಪನ್ನಗಳನ್ನು ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೆ ದೇಶದ ಯಾವುದೇ ಭಾಗದಲ್ಲಿ ಉತ್ತಮ ಬೆಲೆಗೆ ಮಾರಬಹುದಾಗಿದೆ. ಕನಿಷ್ಟ ಬೆಂಬಲ ಬೆಲೆ ಮುಂದುವರೆಯಲಿದ್ದು ರೈತರು ಆಹಾರ ತಯಾರಿಕಾ ಕೈಗಾರಿಕೆಗಳೊಂದಿಗೆ ನೇರ ಒಪ್ಪಂದ ಮಾಡಿ ತಮ್ಮ ಇಚ್ಛಿತ ಬೆಲೆಯನ್ನು ಪಡೆಯಬಹುದಾಗಿದೆ” ಎಂದು ಬರೆದುಕೊಂಡಿದ್ದಾರೆ.

”ಬೆಳೆ ಖರೀದಿಸುವ ಬಂಡವಾಳಶಾಯಿಗಳು ಅಗತ್ಯವಿರುವ ಯಂತ್ರೋಪಕರಣಗಳನ್ನು ರೈತರಿಗೆ ಒದಗಿಸಬೇಕು. ರೈತರಿಗೆ ಸೂಕ್ತ ತಾಂತ್ರಿಕ ಸಲಹೆ, ಬೆಳೆನಾಶವಾದ್ದಲ್ಲಿ ಪೂರ್ಣ, ಭಾಗಶ: ನಷ್ಟ ಭರಿಸುವ ಜವಾಬ್ದಾರಿಯೂ ಬಂಡವಾಳಶಾಯಿಗಳ ಮೇಲೆ ಇರುತ್ತದೆ” ವಿಪಕ್ಷಗಳು ಇದನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ಅಸಮಾದಾನ ಹೊರಹಾಕಿದ್ದಾರೆ.

- Advertisement -

Latest News

error: Content is protected !!