Monday, April 29, 2024
Homeಕ್ರೀಡೆಪಂದ್ಯದ ವೇಳೆ ಕನ್ನಡದಲ್ಲಿ ಅಸಭ್ಯ ಪದ ಬಳಸಿದ ಕೆ.ಎಲ್.ರಾಹುಲ್, ವೈರಲ್ ಆಯ್ತು ವಿಡಿಯೋ...

ಪಂದ್ಯದ ವೇಳೆ ಕನ್ನಡದಲ್ಲಿ ಅಸಭ್ಯ ಪದ ಬಳಸಿದ ಕೆ.ಎಲ್.ರಾಹುಲ್, ವೈರಲ್ ಆಯ್ತು ವಿಡಿಯೋ…

spot_img
- Advertisement -
- Advertisement -

ಅಬುಧಾಬಿ: ಕಿಂಗ್ಸ್ ಎಲವೆನ್ ಪಂಜಾಬ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದ ವೇಳೆ ಕನ್ನಡಿಗ ಕೆ.ಎಲ್. ರಾಹುಲ್ ಅವರು ಕನ್ನಡದಲ್ಲಿ ಅಸಭ್ಯ ಪದವೊಂದನ್ನು ಬಳಕೆ ಮಾಡಿರುವ ವಿಡಿಯೋವೊಂದು ಭಾರೀ ವೈರಲ್ ಆಗಿದೆ.

ರಾಹುಲ್ ಫೀಲ್ಡಿಂಗ್ ಮಾಡುತ್ತಿದ್ದಾಗ ತಂಡದ ಆಟಗಾರರನ್ನು ಉದ್ದೇಶಿಸಿ ಕನ್ನಡದಲ್ಲಿ ಮಾತನಾಡುತ್ತಾ, ‘ಮುಂದೆ ಬರೋ…’ ಎಂದು ಅಸಭ್ಯ ಪದವನ್ನು ಬಳಸಿರುವುದು ಸ್ಟಂಪ್ ಮೈಕ್‍ನಲ್ಲಿ ಸೆರೆಯಾಗಿದೆ. ಆದರೆ ರಾಹುಲ್ ಯಾರನ್ನು ಉದ್ದೇಶಿಸಿ ಈ ಪದ ಬಳಕೆ ಮಾಡಿದ್ದಾರೆ ಎಂಬುವುದು ಸ್ಪಷ್ಟವಾಗಿಲ್ಲ. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿ ಕರ್ನಾಟಕದ ಆಟಗಾರರಾದ ಕರುಣ್ ನಾಯರ್, ಮಯಾಂಕ್ ಅಗರ್ವಾಲ್ ಮತ್ತು ಕೃಷ್ಣಪ್ಪ ಗೌತಮ್ ನಿನ್ನೆ ನಡೆದ ಪಂದ್ಯದಲ್ಲಿ ಆಡಿದ್ದರು. ಆದ್ದರಿಂದ ಈ ಆಟಗಾರರಲ್ಲಿ ಒಬ್ಬರನ್ನು ಉದ್ದೇಶಿಸಿ ರಾಹುಲ್ ನಿಂದಿಸಿರಬಹುದು ಎನ್ನಲಾಗಿದೆ.

ಈ ಬಾರಿ ಐಪಿಎಲ್ ಟೂರ್ನಿ ಖಾಲಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಪ್ರೇಕ್ಷಕರಿಲ್ಲದ ಕಾರಣ ಹೆಚ್ಚಿನ ಶಬ್ದವಿರುವುದಿಲ್ಲ. ಹೀಗಾಗಿ ರಾಹುಲ್ ಸ್ಟಂಪ್ಸ್ ನಿಂದ ದೂರ ನಿಂತಿದ್ದರು. ಅವರು ಆಡಿದ ಮಾತುಗಳು ಸ್ಟಂಪ್ ಮೈಕ್‍ನಲ್ಲಿ ಸ್ಪಷ್ಟವಾಗಿ ದಾಖಲಾಗಿದೆ. ಆಟಗಾರರೊಂದಿಗೆ ಕೆಎಲ್ ರಾಹುಲ್ ಕನ್ನಡದಲ್ಲಿ ಮಾತನಾಡುತ್ತಿರುವುದ ಇದೇ ಮೊದಲಲ್ಲ. ಈ ಹಿಂದೆಯೂ ಹಲವು ಬಾರಿ ರಾಹುಲ್ ವಿದೇಶಿ ಆಟಗಾರರನ್ನು ಕನ್ನಡಲ್ಲೇ ಮಾತನಾಡಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

- Advertisement -
spot_img

Latest News

error: Content is protected !!