Friday, June 5, 2026
Homeಕರಾವಳಿಕಡಬ; ತನ್ನ ಚಿನ್ನದ ಅಂಗಡಿಯ ಉದ್ಘಾಟನೆಯ ದಿನವೇ ಯುವಕ ಸಾವನ್ನಪ್ಪಿದ ಪ್ರಕರಣ; ಮರಣೋತ್ತರ ಪರೀಕ್ಷೆಯಲ್ಲಿ ಗೊತ್ತಾಯ್ತು...

ಕಡಬ; ತನ್ನ ಚಿನ್ನದ ಅಂಗಡಿಯ ಉದ್ಘಾಟನೆಯ ದಿನವೇ ಯುವಕ ಸಾವನ್ನಪ್ಪಿದ ಪ್ರಕರಣ; ಮರಣೋತ್ತರ ಪರೀಕ್ಷೆಯಲ್ಲಿ ಗೊತ್ತಾಯ್ತು ನಿಜಾಂಶ

- Advertisement -
- Advertisement -

ಕಡಬ; ತನ್ನ ಚಿನ್ನದ ಅಂಗಡಿಯ ಉದ್ಘಾಟನೆಯ ದಿನವೇ ಯುವಕ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಹತ್ವದ ಅಪ್ಡೇಟ್ ಲಭ್ಯವಾಗಿದೆ.  ಮರಣೋತ್ತರ ಪರೀಕ್ಷೆಯಲ್ಲಿ ಸಾರ್ವಜನಿಕರ ಅನುಮಾನಗಳಿಗೆ ಉತ್ತರ ಸಿಕ್ಕಿದೆ.

ಕಡಬದ ನಾಗಪ್ರಸಾದ್ ನಿನ್ನ ತನ್ನ ಚಿನ್ನದ ಅಂಗಡಿಯ ಉದ್ಘಾಟನೆಯ ದಿನವೇ ಗುಂಡ್ಯ ಸಮೀಪದ ಕೆಂಪು ಹೊಳೆಯ ಸಮೀಪ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.  ಜನ  ಈಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಇದೀಗ ನಾಗಪ್ರಸಾದ್ ಅವರ ಪೋಸ್ಟ್ ಮಾರ್ಟಂ ವರದಿ ಬಂದಿದ್ದು ಸಾವಿನ ಕುರಿತ ಸಂಶಯಗಳಿಗೆ ತೆರೆ ಬಿದ್ದಿದೆ.

ಮರಣೋತ್ತರ ಪರೀಕ್ಷೆ ವರದಿಯಲ್ಲಿ ನಾಗಪ್ರಸಾದ್ ಸಹಜ ರಸ್ತೆ ಅಪಘಾತಕ್ಕೆ ಬಲಿಯಾಗಿರುವುದಾಗಿ ತಿಳಿದು ಬಂದಿದೆ.ಚಿನ್ನದ ಅಂಗಡಿ ಉದ್ಘಾಟನೆಗೆ ಸಿದ್ದತೆ ಮಾಡುತ್ತಿದ್ದ ಮುನ್ನ ಕಡಬ ನಿವಾಸಿಯಾಗಿರುವ ದಯಾನಂದ ಆಚಾರ್ಯ ಅವರ ಪುತ್ರ ನಾಗಪ್ರಸಾದ್ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವುದು ಹಲವು ಸಂಶಯಕ್ಕೆ ಕಾರಣವಾಗಿತ್ತು.

ಇದೀಗ ಪೋಸ್ಟ್ ಮಾರ್ಟಮ್ ವರದಿ ಬಂದಿದ್ದು ನಾಗಪ್ರಸಾದ್ ಅಪಘಾತದಿಂದ ಮೃತಪಟ್ಟಿದ್ದಾರೆ ಎಂದು ದೃಢಪಟ್ಟಿದ್ದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಪಘಾತ ಸ್ಥಳದಲ್ಲಿ ಅನುಮಾನ ಮೂಡಿಸಿದ್ದ ಎರಡು ಹೆಲ್ಮೆಟ್ ಮನೆಯಿಂದಲೇ ತಂದಿರುವ ಬಗ್ಗೆ ತನಿಖೆ ವೇಳೆ ಪೊಲೀಸರಿಗೆ ಗೊತ್ತಾಗಿದೆ ಎನ್ನಲಾಗಿದೆ.

- Advertisement -

Latest News

error: Content is protected !!