Thursday, June 4, 2026
Homeತಾಜಾ ಸುದ್ದಿತಾಯಿ ಸಾವಿನ ದುಃಖದಲ್ಲೂ SSLC ಪರೀಕ್ಷೆ ಬರೆದ ವಿದ್ಯಾರ್ಥಿನಿ

ತಾಯಿ ಸಾವಿನ ದುಃಖದಲ್ಲೂ SSLC ಪರೀಕ್ಷೆ ಬರೆದ ವಿದ್ಯಾರ್ಥಿನಿ

- Advertisement -
- Advertisement -

ಮೈಸೂರು: ತಾಯಿ ಸಾವಿನ ನೋವಲ್ಲಿಯೂ ವಿದ್ಯಾರ್ಥಿನಿಯೊಬ್ಬಳು ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಹಾಜರಾಗಿರುವ ಘಟನೆ ಮೈಸೂರು ತಾಲೂಕು ಬಿರಿಹುಂಡಿ ಗ್ರಾಮದಲ್ಲಿ ನಡೆದಿದೆ.

ವಿದ್ಯಾರ್ಥಿನಿ ದೀಪು ಎಂಬಾಕೆಯ ತಾಯಿ ತಾಯಿ ಲಕ್ಷ್ಮಮ್ಮ ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ಮೃತಪಟ್ಟಿದ್ದರು. ಈ ದುಃಖದ ನಡುವೆಯೂ ದೀಪು ಮೈಸೂರಿನ ರೂಪಾನಗರದ ಸೆಂಟರ್ ನಲ್ಲಿ ಇಂದು ಪರೀಕ್ಷೆಗೆ‌ ಹಾಜರಾಗಿದ್ದಾಳೆ.

ತಾಯಿ ನಿಧನದ ನಂತರ ಮಾನಸಿಕವಾಗಿ ಕುಂದಿ ಹೋಗಿದ್ದ ದೀಪು ಪರೀಕ್ಷೆ ಬರೆಯಲು ವಿದ್ಯಾರ್ಥಿನಿ ಹಿಂದೇಟು ಹಾಕಿದ್ದಳು. ಆದರೆ ಗ್ರಾಮದ ಮುಖಂಡರು ವಿದ್ಯಾರ್ಥಿನಿ ಧೈರ್ಯ ತುಂಬಿ ಪರೀಕ್ಷೆಗೆ ಹಾಜರಾಗಲು ನೆರವಾಗಿದ್ದಾರೆ.

ಶುಕ್ರವಾರ ನಡೆದ ಹಿಂದಿ ಪರೀಕ್ಷೆಗೆ ಬೀರಿಹುಂಡಿ ಗ್ರಾಪಂ ಮಾಜಿ ಸದಸ್ಯ ಶಿವಣ್ಣ ಕರೆತಂದು ಪರೀಕ್ಷೆ ಬರೆಸಿದ್ದಾರೆ. ಪರೀಕ್ಷೆ ಬರೆದ ಬಳಿಕ ಯುವತಿ ಶವ ಸಂಸ್ಕಾರದಲ್ಲಿ ಭಾಗಿಯಾಗಿದ್ದಾಳೆ.

- Advertisement -

Latest News

error: Content is protected !!