Thursday, June 4, 2026
Homeಕರಾವಳಿಉಡುಪಿಮೀನಿನ ಬಲೆ ಬಿಡಿಸಲು ಹೋಗಿ ಯುವಕರಿಬ್ಬರು ನೀರಿನಲ್ಲಿ ಮುಳುಗಿ ಸಾವು

ಮೀನಿನ ಬಲೆ ಬಿಡಿಸಲು ಹೋಗಿ ಯುವಕರಿಬ್ಬರು ನೀರಿನಲ್ಲಿ ಮುಳುಗಿ ಸಾವು

- Advertisement -
- Advertisement -

ಬ್ರಹ್ಮಾವರ : ಬ್ರಹ್ಮಾವರದ ಬಾರ್ಕೂರಿನ ಹಾಲೆಕೊಡಿಯಲ್ಲಿ ರಾತ್ರಿ ಹಾಕಿದ್ದ ಮೀನಿನ ಬಲೆಯನ್ನುಇಂದು ಬೆಳಗ್ಗೆ  ಬಿಡಿಸಲು ಹೋಗಿ ಯುವಕರಿಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಹರ್ಷ ಹಾಗೂ ಕಾರ್ತಿಕ್ ಮೃತ ದುರ್ದೈವಿಗಳು. ಹರ್ಷ ಹಾಗೂ ಕಾರ್ತಿಕ್ ನಿನ್ನೆ ರಾತ್ರಿ ಮೀನಿಗಾಗಿ ಬಲೆ ಹಾಕಿ ಬಂದಿದ್ದರು. 

ಇಂದು  ಬೆಳಗ್ಗೆ ಬಲೆಯನ್ನು ಬಿಡಿಸೋದಕ್ಕಾಗಿ ತೆರಳಿದ್ದಾರೆ. ಆದರೆ ಬಲೆ ಕಟ್ಟಿದ ಪ್ರದೇಶ ತುಂಬಾ ಆಳವಿದ್ದರಿಂದ ಅವರು ಮೇಲೆ ಏಳಲಾಗದೇ ಮುಳುಗಿ ಸಾವನ್ನಪ್ಪಿದ್ದಾರೆ. ತಕ್ಷಣ ಸ್ಥಳೀಯ ಸ್ಥಳಕ್ಕೆ ಸ್ಥಳೀಯರು ಹಾಗೂ ಮೀನುಗಾರರು ಧಾವಿಸಿದ್ದಾರೆ. ಬಳಿಕ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿಗೂ ಸುದ್ದಿ ಮುಟ್ಚಿಸಿದ್ದಾರೆ. ಆದರೆ ಪ್ರಯೋಜನವಾಗಿಲ್ಲ. ನಂತ  ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯರ ಸಹಕಾರದಿಂದ  ಶವಗಳನ್ನು ಮೇಲಕ್ಕೆತ್ತಲಾಯಿತು. ಇನ್ನು ಮೃತ ಯುವಕ ಹರ್ಷ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಹಾಗೇ ಕಾರ್ತಿಕ್  ಬಿಕಾಂ ಕೊನೆಯ ವರ್ಷದ ವಿದ್ಯಾರ್ಥಿಯಾಗಿದ್ದ. ಈ ಸಂಬಂಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

- Advertisement -

Latest News

error: Content is protected !!