Saturday, October 17, 2026
Homeತಾಜಾ ಸುದ್ದಿಹಂಪಿಗೆ ಕುಟುಂಬ ಸಮೇತ ಭೇಟಿ ನೀಡಿದ ಮೈಸೂರು ಯುವರಾಜ

ಹಂಪಿಗೆ ಕುಟುಂಬ ಸಮೇತ ಭೇಟಿ ನೀಡಿದ ಮೈಸೂರು ಯುವರಾಜ

- Advertisement -
- Advertisement -

ಹೊಸಪೇಟೆ: ವಿಶ್ವವಿಖ್ಯಾತ ಹಂಪಿಗೆ ಮೈಸೂರು‌ ಮಹಾರಾಜರ ವಂಶಸ್ಥರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಭೇಟಿ ನೀಡಿದ್ದಾರೆ.

ಕುಟುಂಬ ಸಮೇತ ಭೇಟಿ ನೀಡಿದ ಯದುವೀರ ಒಡೆಯರ್, ಪತ್ನಿ ತ್ರಿಷಿಕಾ ಕುಮಾರಿ ಹಾಗೂ ಪುತ್ರ ಆದ್ಯವೀರ್ ಒಡೆಯರ್ ಜೊತೆ ಹಂಪಿಗೆ ಆಗಮಿಸಿದ್ದಾರೆ. ಯದುವೀರ ಒಡೆಯರ್ ಜೊತೆ ಸಂಬಂಧಿಕರು ಹಾಗೂ ಕುಟುಂಬಸ್ಥರೂ ಸಹ ಆಗಮಿಸಿದ್ದು, ಹಂಪಿಯ ಶ್ರೀ ಪಂಪಾ ವಿರೂಪಾಕ್ಷನ ದರ್ಶನ ಪಡೆದಿದ್ದಾರೆ.

ಕಳೆದ ಎರಡು ದಿನಗಳಿಂದ ಹಂಪಿಯ ಸಮೀಪ ಯದುವೀರ ಒಡೆಯರ್ ಕುಟುಂಬ ಸಮೇತ ವಾಸ್ತವ್ಯ ಹೂಡಿದ್ದು, ಹಂಪಿಯ ಸ್ಮಾರಕಗಳನ್ನು ವೀಕ್ಷಣೆ ಮಾಡಲಿದ್ದಾರೆ.

- Advertisement -

Latest News

error: Content is protected !!