Friday, June 26, 2026
Homeಅಪರಾಧಪ್ರೊಫೆಸರ್ ನಿಂದಲೇ ಅತ್ಯಾಚಾರ ಯತ್ನ ಪ್ರಕರಣ: ಸ್ಫೋಟಕ ವಿಚಾರ ಬಾಯ್ಬಿಟ್ಟ ಸಂತ್ರಸ್ಥೆ!

ಪ್ರೊಫೆಸರ್ ನಿಂದಲೇ ಅತ್ಯಾಚಾರ ಯತ್ನ ಪ್ರಕರಣ: ಸ್ಫೋಟಕ ವಿಚಾರ ಬಾಯ್ಬಿಟ್ಟ ಸಂತ್ರಸ್ಥೆ!

- Advertisement -
- Advertisement -

ಮೈಸೂರು : ಮೈಸೂರು ವಿಶ್ವವಿದ್ಯಾನಿಲಯದ ಪ್ರೊಫೆಸರ್ ಒಬ್ಬರು ಸಂಶೋಧನಾ ವಿದ್ಯಾರ್ಥಿಯನ್ನು ಮನೆಗೆ ಕರೆಸಿಕೊಂಡು ಅತ್ಯಾಚಾರವೆಸಗಿದ್ದಾರೆ ಎಂದು ಸಂತ್ರಸ್ತ ವಿದ್ಯಾರ್ಥಿನಿ ದೂರೊಂದನ್ನು ದಾಖಲಿಸಿದ್ದಳು. ಇದೀಗ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.

ಪೊಲೀಸರ ವಿಚಾರಣೆಯ ವೇಳೆಯಲ್ಲಿ ವಿದ್ಯಾರ್ಥಿನಿ ಸ್ಫೋಟಕ ಹೇಳಿಕೆಯನ್ನು ನೀಡಿದ್ದಾಳೆ. ನಾನು ಪ್ರೊ. ರಾಮಚಂದ್ರ ಅವರು ನನ್ನ ಪಿಎಚ್‌ಡಿ ಮಾರ್ಗದರ್ಶಕರು. ಸಂಶೋಧನೆಯ ಬಗ್ಗೆ ನಾವಿಬ್ಬರೂ ಮಾತನಾಡುತ್ತಿದ್ದೆವು. ಅವರ ಪತ್ನಿ ಲೋಲಾಕ್ಷಿ ನನ್ನನ್ನು ಹೆದರಿಸಿ ದೂರು ಬರೆಯಿಸಿಕೊಂಡಿದ್ದರು ಎಂದು ಸಂತ್ರಸ್ತ ವಿದ್ಯಾರ್ಥಿನಿ ಇದೀಗ ಜಯಲಕ್ಷ್ಮೀಪುರಂ ಠಾಣೆಯ ಪೊಲೀಸರಿಗೆ ದೂರು ನೀಡಿದ್ದಾಳೆ.


ಮೇಲ್ನೋಟಕ್ಕೆ ಇದೊಂದು ಕೌಟುಂಬಿಕ ಕಲಹ ಅನ್ನೋದು ಕಂಡು ಬರುತ್ತಿದೆ. ಪತಿಯ ಮೇಲಿನ ಸಿಟ್ಟಿಗೆ ಪತ್ನಿ ಇದೀಗ ರೇಪ್‌ ಆರೋಪ ಮಾಡಿಸಿದ್ರಾ ಅನ್ನೋ ಅನುಮಾನ ವ್ಯಕ್ತವಾಗುತ್ತಿದೆ. ಸಂತ್ರಸ್ತೆ ನೀಡಿದ ಹೇಳಿಕೆಯ ಬೆನ್ನಲ್ಲೇ ರೇಪ್‌ ಪ್ರಕರಣ ಗಂಭೀರತೆಯನ್ನು ಕಳೆದುಕೊಂಡಿದೆ.

ಇನ್ನೊಂದೆಡೆ ಮೈಸೂರು ವಿವಿ ಪ್ರಾಧ್ಯಾಪಕ ದಂಪತಿಗಳಿಗೆ ನೋಟಿಸ್‌ ಜಾರಿ ಮಾಡಲು ಚಿಂತನೆಯನ್ನುಚಿಂತನೆ ನಡೆಸಿದೆ. ವೈಯಕ್ತಿಕ ವಿಚಾರದಲ್ಲಿ ಮೈಸೂರು ವಿವಿ ಹೆಸರು ಹಾಳುತ್ತಿದ್ದು, ಇಬ್ಬರ ಪ್ರಕರಣ ಇದೀಗ ವಿವಿಗೆ ಮುಜುಗರ ತಂದಿದೆ ಎಂದು ವಿವಿ ಕುಲಸಚಿವ ಶಿವಪ್ಪ ಹೇಳಿದ್ದಾರೆ.

- Advertisement -

Latest News

error: Content is protected !!