Sunday, June 7, 2026
Homeಉತ್ತರ ಕನ್ನಡಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ನನ್ನ ಮಗನೂ ಕಾಣೆಯಾಗಿದ್ದಾನೆ; ದಯವಿಟ್ಟು ಹುಡುಕಿಕೊಡಿ ಎಂದು ತಾಯಿಯೊಬ್ಬರಿಂದ ದೂರು

ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ನನ್ನ ಮಗನೂ ಕಾಣೆಯಾಗಿದ್ದಾನೆ; ದಯವಿಟ್ಟು ಹುಡುಕಿಕೊಡಿ ಎಂದು ತಾಯಿಯೊಬ್ಬರಿಂದ ದೂರು

- Advertisement -
- Advertisement -

ಕಾರವಾರ : ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ನನ್ನ ಮಗನೂ ಕಾಣೆಯಾಗಿದ್ದಾನೆ ದಯವಿಟ್ಟು ತಾಯಿಯೊಬ್ಬರು ದೂರು ಕೊಟ್ಟಿದ್ದಾರೆ.

ಗೋಕರ್ಣ ಬಳಿಯ ಗಂಗೆಕೊಳ್ಳದ ಲೋಕೇಶ್ ಯುವಕ ನಾಪತ್ತೆಯಾಗಿದ್ದು, ಮಗನನ್ನು ಹುಡುಕಿಕೊಡಿ ಎಂದು ಲೋಕೇಶ್ ತಾಯಿ ಮಹಾದೇವಿ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕಳೆದ ಐದು ದಿನಗಳಿಂದ ಲೋಕೇಶ್ ಮನೆಗೆ ಬಂದಿಲ್ಲ. ಗುಡ್ಡ ಕುಸಿತದ ದಿನ ಅಲ್ಲಿನ ಹೋಟೆಲ್ ನಲ್ಲಿ ಲೋಕೇಶ್ ಇದ್ದ ಎಂಬ ಮಾಹಿತಿ ಇದೆ. ಹೋಟೆಲ್ ನಲ್ಲಿ ಲೋಕೇಶ್ ಇದ್ದ ಬಗ್ಗೆ ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕ ಕೂಡ ನೋಡಿದ್ದರಂತೆ. ಬಸ್ ಪಾಸ್ ಆದ ಕೆಲವೇ ನಿಮಿಷಗಳಲ್ಲಿ ಗುಡ್ಡ ಕುಸಿತವಾಗಿದೆ ಎಂದು ಅವರು ಹೇಳಿದ್ದಾರೆ.

ಗೋವಾದಲ್ಲಿ ಕೆಲಸ ಮಾಡುತ್ತಿದ್ದ ಲೋಕೇಶ್, ರಜೆ ಮೇಲೆ ಊರಿಗೆ ಬಂದಿದ್ದ, ಗುಡ್ಡ ಕುಸಿತದ ದಿನ ಶೃಂಗೇರಿಗೆ ಹೋಗಿ ಬರುವುದಾಗಿ ಹೇಳಿ ಹೊರಟಿದ್ದ. ಐದು ದಿನಗಳಿಂದ ಶೃಂಗೇರಿಗೂ ಹೋಗಿಲ್ಲ, ಅತ್ತ ಕೆಲಸಕ್ಕೆ ಗೋವಾಗೂ ಹೋಗಿಲ್ಲ. ಹೀಗಾಗಿ ಗುಡ್ಡ ಕುಸಿತದಲ್ಲಿ ಲೋಕೇಶ್ ಕಣ್ಮರೆಯಾಗಿರಬಹುದು ಎಂದು ಕುಟುಂಬಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

- Advertisement -

Latest News

error: Content is protected !!